
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಒಂದು ವಿಡಿಯೋವನ್ನ ನೋಡಿ. ಇಲ್ಲಿ ಕಾನ್ಸ್ ಟೇಬಲ್ ಕೋತಿಯೊಂದಕ್ಕೆ ಮಾವಿನ ಹಣ್ಣನ್ನ ಪ್ರೀತಿಯಿಂದ ತಿನ್ನಿಸುತ್ತಿರೋ ರೀತಿ ಹೇಗಿದೆ ನೋಡಿ. ಈ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿ ಹೋಗಿದ್ದಾರೆ.
ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ, ತಿನ್ನೋಕೆ ಆಹಾರವಿಲ್ಲದೆ ಪರದಾಡ್ತಾ ಇರುತ್ತೆ. ಇಂತಹ ಸಂದರ್ಭದಲ್ಲಿ ಯಾರಾದ್ರೂ ಏನಾದರೂ ಕೊಟ್ಟರೆ ಅವುಗಳಿಗೆ ಅದೇ ಮೃಷ್ಟಾನ್ನ ಭೋಜನ. ಹೀಗೆ ಹಸಿದು ಬಂದ ಕೋತಿಗೆ ಕಾನ್ಸ್ ಟೇಬಲ್ ಒಬ್ಬರು ವಾಹನದಲ್ಲಿ ಕುಳಿತು ಆಹಾರ ನೀಡುತ್ತಿರೋ ವಿಡಿಯೋ ಇದು. ಪೊಲೀಸ್ ಕಾನ್ಸ್ ಟೇಬಲ್ ಮಾಡಿರೋ ಈ ಕೆಲಸ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
17 ಸೆಕೆಂಡಿನ ಈ ವಿಡಿಯೋ ಕ್ಲಿಪ್ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ವಾಹನದಲ್ಲಿ ಬಾಗಿಲು ತೆಗೆದುಕೊಂಡು ಹಣ್ಣನ್ನ ಚಾಕುವಿನಿಂದ ಕಟ್ ಮಾಡಿ ತಿನ್ತಾ ಇದ್ದಾರೆ. ಆಗಲೇ ಕೋತಿಯೊಂದು ಮರಿಯನ್ನ ಬೆನ್ನಮೇಲೆ ಹೊತ್ತುಕೊಂಡು ಬರುತ್ತೆ. ಪೊಲೀಸ್ ಪೇದೆ ಮುಂದೆ ನಿಂತು ಹಣ್ಣಿಗಾಗಿ ಕೈ ಚಾಚುತ್ತೆ. ಕೋತಿ ಕೈಗೆ ಚೂರು ಚೂರು ಹಣ್ಣನ್ನ ಕಟ್ ಮಾಡಿ ಕೊಟ್ಟ ಮೇಲೆ ಕೋತಿ ತಾನು ತಿಂದು ಮರಿಗೂ ತಿನ್ನಿಸುತ್ತೆ.
ಉತ್ತರ ಪ್ರದೇಶದ ಪೊಲೀಸರು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಶಹಜಹಾಪುರ್ ಪೊಲೀಸ್ ಕಾನ್ಸ್ ಟೇಬಲ್ ಮೋಹಿತ್ ಅವರು ಮಾಡಿರೋ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ `UP 112 ಸಬಕೆ MON-KEY ಸಮಜೆ`ಅನ್ನೋ ಕಾಪ್ಷನ್ ಕೊಟ್ಟಿದ್ದಾರೆ. ಈಗಾಗಲೇ ಈ ವಿಡಿಯೋ ವೈರಲ್ ಆಗಿದ್ದು ಇದನ್ನ 40 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.