alex Certify ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ

ತಮ್ಮ ಸಂಬಂಧವನ್ನು ಕುಟುಂಬಸ್ಥರು ವಿರೋಧಿಸಿದರು ಎಂಬ ಕಾರಣಕ್ಕೆ 26 ವರ್ಷದ ಪುರುಷ ಹಾಗೂ ಆತನ ಪತ್ನಿಯ 22 ವರ್ಷದ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಪಿಲಿಭಿತ್​ ಜಿಲ್ಲೆ ಮೂಲದ ವ್ಯಕ್ತಿ ಹಾಗೂ ಆತನ ಪತ್ನಿಯ ಕಿರಿಯ ಸಹೋದರಿ ಮಂಗಳವಾರ ಬರೇಲಿಯ ಭೋಜಪುರ ಎಂಬಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಟುಂಬಸ್ಥರಿಗೆ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಬರೇಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪೊಲೀಸರ ತನಿಖೆಯಲ್ಲಿ ಮೃತ ವ್ಯಕ್ತಿ ಹಾಗೂ ಯುವತಿ ಸಂಬಂಧದಲ್ಲಿ ಬಾವ – ನಾದಿನಿ ಎಂದು ತಿಳಿದು ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಇವರಿಬ್ಬರ ಲವ್ವಿ- ಡವ್ವಿಯನ್ನು ಕುಟುಂಬಸ್ಥರು ವಿರೋಧಿಸಿದ್ದರು. ಇದರಿಂದ ಮನನೊಂದಿದ್ದ ಇವರಿಬ್ಬರು ಮನೆಯಿಂದ ಪರಾರಿಯಾಗಿ ವಿಷ ಸೇವಿಸಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...