alex Certify ಭಾವುಕರನ್ನಾಗಿಸುತ್ತೆ ಈ ಪಕ್ಷಿ – ವ್ಯಕ್ತಿಯ ನಡುವಿನ ಅನುಬಂಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ಈ ಪಕ್ಷಿ – ವ್ಯಕ್ತಿಯ ನಡುವಿನ ಅನುಬಂಧ…!

ಸಾರಸ್ ಕ್ರೇನ್ ಪಕ್ಷಿ ಹಾಗೂ ಅದನ್ನು ರಕ್ಷಿಸಿದ ಉತ್ತರ ಪ್ರದೇಶದ ವ್ಯಕ್ತಿಯ ನಡುವಿನ ಅನನ್ಯ ಸ್ನೇಹ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಕ್ಷಿಯನ್ನು ರಕ್ಷಿಸಿದ ವ್ಯಕ್ತಿಯು ಮೃಗಾಲಯದಲ್ಲಿ ಅದನ್ನು ಮತ್ತೆ ಭೇಟಿ ಮಾಡಿದ್ದಾರೆ.

ಹೌದು, ಸಾರಸ್ ಕ್ರೇನ್ ಪಕ್ಷಿಯನ್ನು ರಕ್ಷಿಸಿದ ಅಮೇಥಿ ಜಿಲ್ಲೆಯ ಆರಿಫ್ ಖಾನ್ ಗುರ್ಜರ್ ಅವರು ಕಾನ್ಪುರ ಮೃಗಾಲಯದಲ್ಲಿ ಮತ್ತೆ ಪಕ್ಷಿಯನ್ನು ಭೇಟಿಯಾಗುವ ಅವಕಾಶ ಪಡೆದಿದ್ದಾನೆ. ಇಬ್ಬರು ಮತ್ತೆ ಒಂದಾಗುತ್ತಿರುವ ವಿಡಿಯೋವನ್ನು ನಿಗರ್ ಪರ್ವೀನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತನ್ನನ್ನು ರಕ್ಷಿಸಿದ ಆರಿಫ್‌ನನ್ನು ಕಂಡ ಸಾರಸ್‌ ಕ್ರೇನ್‌ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಆರಿಫ್ ನನ್ನು ನೋಡುತ್ತಲೇ ಪಕ್ಷಿ ಖುಷಿಯಿಂದ ಕುಣಿದಾಡತೊಡಗಿತು. ವಿಡಿಯೋ ನೋಡುತ್ತಿದ್ದರೆ ಎಂಥವರಿಗೂ ಕಣ್ಣೀರು ಬರದೆ ಇರದು. ಮೂಕಜೀವಿಯನ್ನು ರಕ್ಷಿಸಿ ಆರಿಫ್ ಮಾನವೀಯತೆ ಮೆರೆದಿದ್ದು, ಇದೀಗ ಪಕ್ಷಿಯನ್ನು ಮತ್ತೆ ಭೇಟಿಯಾಗಿ ಸಂತಸಗೊಂಡಿದ್ದಾರೆ.

ಅಮೇಥಿ ಜಿಲ್ಲೆಯ ಮಂದ್ಖಾ ಗ್ರಾಮದ ತನ್ನ ಹೊಲದಲ್ಲಿ ಕಾಲಿನಿಂದ ರಕ್ತಸ್ರಾವವಾಗಿ ಮಲಗಿದ್ದ ಪಕ್ಷಿಯನ್ನು ಆರಿಫ್ ನೋಡಿ, ಅದನ್ನು ರಕ್ಷಿಸಲು ಧಾವಿಸಿದ್ರು. ಒಂದು ವರ್ಷ ಪಕ್ಷಿಯನ್ನು ಚೆನ್ನಾಗಿ ಸಾಕಿ ಸಲಹಿದ್ರು. ಹಕ್ಕಿ ಕೂಡ ಆರಿಫ್ ನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿತ್ತು. ಆರಿಫ್ ಎಲ್ಲೇ ಹೋದರೂ ಅವನ ಹಿಂದೆಯೇ ಸಾಗುತ್ತಿತ್ತು.

ಕಳೆದ ವಾರ ರಾಯ್ ಬರೇಲಿಯಲ್ಲಿರುವ ಸಮಸ್ಪುರ್ ಪಕ್ಷಿಧಾಮಕ್ಕೆ ಅಧಿಕಾರಿಗಳು ಪಕ್ಷಿಯನ್ನು ಕರೆದೊಯ್ದಿದ್ದಾರೆ. ಮೃಗಾಲಯಕ್ಕೆ ಪಕ್ಷಿ ಸ್ಥಳಾಂತರಗೊಂಡ ನಂತರ ಇದೀಗ ಆರೀಫ್ ತನ್ನ ಮುದ್ದಿನ ಸಾರಸ್ ನನ್ನು ನೋಡಲು ಭೇಟಿ ಕೊಟ್ಟಿದ್ದಾನೆ. ಪಕ್ಷಿ-ಮಾನವನ ನಡುವಿನ ಸ್ನೇಹ ಸಂಬಂಧ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...