ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೇ ಕತ್ತು ಸೀಳಿ ಕೊಂದಿದ್ದಾನೆ.
ಬಲಿಯಾದವನನ್ನು 35 ವರ್ಷದ ಪಂಕಜ್ ಶುಕ್ಲಾ ಎಂದು ಗುರುತಿಸಲಾಗಿದೆ, ಆತ ಅಮೇಥಿ ನಿವಾಸಿಯಾಗಿದ್ದು, ತನ್ನ ತಾಯಿಯ ಅಜ್ಜನ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆತನ ತಾಯಿಯ ಸೋದರ ಸಂಬಂಧಿ ಗುಲ್ಲು ಮಿಶ್ರಾ ಕೊಲೆ ಮಾಡಿದವನಾಗಿದ್ದಾನೆ.
ವ್ಯಾಪ್ತಿಯ ಭೂಪುರ್ ಗ್ರಾಮದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಕರೆ ಬಂದಿದ್ದು, ಯುವಕನ ಶವ ದೇವಸ್ಥಾನದಲ್ಲಿ ಬಿದ್ದಿದೆ ಎಂದು ಮಾಹಿತಿ ಬಂದಿತ್ತು ಎಂದು ಕುಮಾರಗಂಜ್ ಪೊಲೀಸ್ ಠಾಣೆ ಅಧಿಕಾರಿ ಸತ್ಯೇಂದ್ರ ಭೂಷಣ್ ತಿವಾರಿ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆತನ ಕತ್ತು ಸೀಳಿರುವುದು ಕಂಡುಬಂದಿತು. ಆರೋಪಿಯನ್ನು ಬಂಧಿಸಲಾಗಿದೆ, ಇಬ್ಬರ ನಡುವೆ ಈ ಹಿಂದೆ ಜಗಳವಾಗಿದ್ದು ಪರಸ್ಪರ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದೆ.