ಆಸ್ತಿ ವಿಚಾರಕ್ಕಾಗಿ ವಿಧವೆ ಸೊಸೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ವೃದ್ಧ ಮಾವನನ್ನ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಪೊಲೀಸ್ ಸೂಪರಿಟೆಂಡೆಂಟ್ ಧರಮ್ವೀರ್ ಸಿಂಗ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಹಲದೌಡರ್ ಏರಿಯಾದಲ್ಲಿ ನಡೆದ ಘಟನೆಯಾಗಿದ್ದು ವಿಧವೆ ಸೊಸೆಯನ್ನ ಸರಪಳಿಯಿಂದ ಕಟ್ಟಿ ಆಕೆಗೆ ಹೊಡೆದದ್ದು ಮಾತ್ರವಲ್ಲದೇ ಆಕೆಯ ಬಟ್ಟೆಯನ್ನ ಹರಿದು ಹಾಕಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಬ್ರಜೇಶ್ ಎಂಬಾತನನ್ನ ಬಂಧಿಸಿದ್ದಾರೆ.