alex Certify ಶುಲ್ಕ ಕಟ್ಟದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ; ಮನಕಲಕುತ್ತೆ ಕಣ್ಣೀರಿಟ್ಟ ಬಾಲಕಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಲ್ಕ ಕಟ್ಟದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ; ಮನಕಲಕುತ್ತೆ ಕಣ್ಣೀರಿಟ್ಟ ಬಾಲಕಿ ವಿಡಿಯೋ

ಉನ್ನಾವೊ (ಉತ್ತರ ಪ್ರದೇಶ): ಶಿಕ್ಷಣ ಎಂಬುದು ಈಗ ಹಣದ ಸರಕಾಗಿಬಿಟ್ಟಿದೆ, ಇದೊಂದು ರೀತಿಯ ವ್ಯಾಪಾರವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಶುಲ್ಕವನ್ನು ಕಟ್ಟದಿದ್ದರೆ ಅಂಥ ಮಕ್ಕಳ ಪಾಡು ಕೇಳುವವರೇ ಇಲ್ಲ. ಇಂಥದ್ದೊಂದು ನೋವಿನ ಘಟನೆ ಉತ್ತರ ಪ್ರದೇಶದ ಉನ್ನಾವೊನಲ್ಲಿಯೂ ನಡೆದಿದ್ದು, ಬಾಲಕಿಯೊಬ್ಬಳ ಅಳುವಿನ ವಿಡಿಯೋ ಭಾರಿ ವೈರಲ್​ ಆಗುತ್ತಿದೆ.

ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲಾ ಶುಲ್ಕವನ್ನು ಪಾವತಿಸದ ಕಾರಣ ಪರೀಕ್ಷೆಗೆ ಹಾಜರಾಗದಂತೆ ತಡೆದ ಘಟನೆ ಇದಾಗಿದೆ. ಪರೀಕ್ಷೆಗೆ ಹೋಗಲು ಆಗದ ವಿದ್ಯಾರ್ಥಿನಿ ಜೋರಾಗಿ ಅಳುತ್ತಿರುವ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋ ಅನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶುಲ್ಕ ಕಟ್ಟಲಾಗದೆ ಅವಮಾನ ಅನುಭವಿಸುತ್ತಿರುವ ಲಕ್ಷಾಂತರ ಮಕ್ಕಳ ನೋವನ್ನು ಈ ಮಗಳ ಕಣ್ಣೀರು ತೋರಿಸುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಅಡಚಣೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ನೈತಿಕ ಹೊಣೆಗಾರಿಕೆಯಾಗಿದೆ. ಖಾಸಗಿ ಸಂಸ್ಥೆಗಳು ಮಾನವೀಯತೆ ಮರೆಯಬಾರದು, ಶಿಕ್ಷಣ ವ್ಯಾಪಾರವಲ್ಲ ಎಂದು ಅವರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...