alex Certify BIG NEWS: ಸಮೀಕ್ಷೆಗಳ ಬಳಿಕ UP ಚುನಾವಣಾ ಫಲಿತಾಂಶ ಕುರಿತು ಜ್ಯೋತಿಷಿಗಳು ಹೇಳಿದ್ದಾರೆ ಈ ಭವಿಷ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮೀಕ್ಷೆಗಳ ಬಳಿಕ UP ಚುನಾವಣಾ ಫಲಿತಾಂಶ ಕುರಿತು ಜ್ಯೋತಿಷಿಗಳು ಹೇಳಿದ್ದಾರೆ ಈ ಭವಿಷ್ಯ….!

ಇತ್ತೀಚೆಗೆ ಉತ್ತರಪ್ರದೇಶದ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತ ಮುಗಿದಿದೆ. ಚುನಾವಣೆ ಅಂತ್ಯವಾದ ಬೆನ್ನಲ್ಲೇ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸಾಕಷ್ಟು ಎಕ್ಸಿಟ್ ಪೋಲ್ ಗಳು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಕ್ಷಕ್ಕೆ ಬೃಹತ್ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿವೆ‌, ಈಗ ಅದೇ ಸಾಲಿಗೆ ಹಲವು ಜ್ಯೋತಿಷಿಗಳು ಸೇರಿಕೊಂಡಿದ್ದು ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವಿನ ನಗೆ ಬೀರಲಿದೆ ಎಂದಿದ್ದಾರೆ.

ಅಶ್ವಿನಿ ಪಾಂಡೆ: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷಿ ಅಶ್ವಿನಿ ಪಾಂಡೆ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆರಂಭದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ. ಈ ವರ್ಷದ ಅಧಿಪತಿ ಮಂಗಳ – ಇದು ಕ್ಷತ್ರಿಯ ಸಮುದಾಯದ ಅಧಿಪತಿಯೂ ಹೌದು. ಹಾಗಾಗಿ ಈ ಸಮಯದಲ್ಲಿ ಯೋಗಿ ಆದಿತ್ಯನಾಥ್ ಗೆಲ್ಲುವ ಸಾಧ್ಯತೆಯೇ ಪ್ರಧಾನವಾಗಿದೆ ಎಂದಿದ್ದಾರೆ.

ವಿನೋದ್ ತ್ಯಾಗಿ ಮತ್ತು ಅಲೋಕ್ ಗುಪ್ತಾ: ಮೀರತ್‌ನ ಪ್ರಸಿದ್ಧ ಜ್ಯೋತಿಷಿ ವಿನೋದ್ ತ್ಯಾಗಿ ಮತ್ತು ಮಥುರಾದ ಅಲೋಕ್ ಗುಪ್ತಾ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಜಯಶಾಲಿಯಾಗಲಿದ್ದಾರೆ, ಅವರ ಜಾತಕವು ಅವರ ವಿಜಯವನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿದ್ದಾರೆ. ಆದರೆ, ಬಿಜೆಪಿಯ ತಾರೆಯರು ಶುಭ ಸೂಚನೆ ನೀಡುತ್ತಿಲ್ಲ. ಇದೇ ಕಾರಣದಿಂದ ಪಕ್ಷವು ಈ ಹಿಂದಿನಂತೆ 200ರ ಗುರಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ, ಕೇವಲ 160 ಸ್ಥಾನಗಳಿಗೆ ಸೀಮಿತವಾಗಿರುತ್ತದೆ ಎಂದಿದ್ದಾರೆ.

ಮನ ಕಲಕುತ್ತೆ ಈ ಸ್ಟೋರಿ: ಯುದ್ಧದಲ್ಲಿ ಮನೆಯವರನ್ನು ಕಳೆದುಕೊಂಡ ಪುಟ್ಟ ಬಾಲಕಿ; ಆಹಾರ, ನೀರು ಸಿಗದೆ ನರಳಿ ನರಳಿ ಪ್ರಾಣ ಬಿಟ್ಟ ಕಂದಮ್ಮ

ನಿಧಿ ಮಿಶ್ರಾ: ಯೋಗಿ ಆದಿತ್ಯನಾಥ್ ಅವರ ನಕ್ಷತ್ರಗಳು ಅವರ ಪರವಾಗಿವೆ ಎಂದು ಜ್ಯೋತಿಷಿ ನಿಧಿ ಮಿಶ್ರಾ ತಿಳಿಸಿದ್ದಾರೆ. ಅವು ಶತ್ರು ಹಂತ ಯೋಗವನ್ನು ರಚಿಸುತ್ತಿವೆ,‌ ಜ್ಯೋತಿಷ್ಯದಲ್ಲಿ ಯೋಗವು ಸ್ಪರ್ಧೆ, ವ್ಯಾಜ್ಯ ಮತ್ತು ಶತ್ರುಗಳ ಮೇಲೆ ಗೆಲ್ಲುವ ಸಾಧ್ಯತೆಯನ್ನು ತೋರಿಸುತ್ತದೆ. ಜೊತೆಗೆ, ಯೋಗಿಯ ಜಾತಕದಲ್ಲಿರುವ ಗುರುವಿನ ಸ್ಥಾನವು ಅವರ ಗೆಲುವಿನ ಅವಕಾಶಗಳನ್ನು ಹೆಚ್ಚಿಸಿದೆ ಎಂದು ವಿವರಿಸಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಪಡೆದು ಭರ್ಜರಿ ಜಯ ಸಾಧಿಸಿತ್ತು. ಜೀ ನ್ಯೂಸ್ ಎಕ್ಸಿಟ್ ಪೋಲ್ ಪ್ರಕಾರ, ಆಡಳಿತಾರೂಢ ಬಿಜೆಪಿ 403 ಸ್ಥಾನಗಳಲ್ಲಿ 223- 248 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ವಿಜಯಶಾಲಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅದರ ಜೊತೆಗೆ, ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟವು ಈ ಬಾರಿ 138-157 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...