ಆಗ ತಾನೇ ಕಟ್ಟಿಕೊಂಡ ಪತಿಗೆ ಮದುವೆಗೂ ಮುನ್ನ ಬೇರೊಬ್ಬ ಹೆಣ್ಣಿನೊಂದಿಗೆ ಅಫೇರ್ ಇತ್ತು ಎಂಬ ಕಾರಣಕ್ಕೆ ಸಿಟ್ಟಾದ ಮದುಮಗಳು, ಗಂಡನ ಮನೆಗೆ ಮೊದಲ ಬಾರಿ ಪ್ರವೇಶಿಸುವ ವೇಳೆ ಆತನಿಗೆ ಕಪಾಳ ಮೋಕ್ಷ ಮಾಡಿ ತವರು ಮನೆಗೆ ಹೋದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಜರುಗಿದೆ.
ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ
ಮದುವೆ ಶಾಸ್ತ್ರಗಳ ಭಾಗವಾಗಿ ತವರು ಮನೆಯಿಂದ ಹೊರಟು ಗಂಡನ ಮನೆ ತುಂಬುವ ವೇಳೆ ಈ ಘಟನೆ ಜರುಗಿದ್ದು, ಕೂಡಲೇ ಮದುಮಗಳು ತನ್ನ ಮದುವೆ ಬಟ್ಟೆಯನ್ನು ಬದಲಿಸಿಕೊಂಡು ಅಪ್ಪನ ಮನೆಗೆ ಹೊರಟಿದ್ದಾರೆ. ಈ ಸುದ್ದಿ ಊರೆಲ್ಲಾ ಹಬ್ಬಿ ಎರಡೂ ಮನೆ ಕಡೆಯ ಮಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಾಡಿದ ಯತ್ನವೆಲ್ಲಾ ವಿಫಲವಾಗಿದೆ.
50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ
ನಂತರ ಪೊಲೀಸರ ಮೊರೆ ಹೋದ ಕುಟುಂಬಸ್ಥರಿಗೆ ಅಲ್ಲೂ ಪರಿಹಾರ ಸಿಕ್ಕಿಲ್ಲ.