alex Certify ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ

ಐಟಿ ಕ್ಷೇತ್ರದ ದಿಗ್ಗಜ ಹಾಗೂ ವೈರಸ್‌ನಿರೋಧಕ ತಂತ್ರಾಂಶದ ರೂವಾರಿ ಜಾನ್ ಮ್ಯಾಕ್‌ಅಫಿ ಸ್ಪೇನ್‌ ಕಾರಾಗೃಹದಲ್ಲಿ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ತೆರಿಗೆ ವಂಚನೆ ಪ್ರಕರಣವೊಂದರಲ್ಲಿ ಅಮೆರಿಕಕ್ಕೆ ಬೇಕಾಗಿದ್ದ ಕಾರಣ ಮ್ಯಾಕ್‌ಅಫಿ ಅವರನ್ನು ಸ್ಪೇನ್‌ನಿಂದ ಗಡೀಪಾರು ಮಾಡಲು ಅಲ್ಲಿನ ನ್ಯಾಯಾಲಯವೊಂದು ಆದೇಶ ಕೊಟ್ಟ ಹಿನ್ನೆಲೆಯಲ್ಲೇ ಅವರ ಸಾವಿನ ಸುದ್ದಿ ಕೇಳಿಬಂದಿದೆ.

ರೈತ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್, ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ

ಬಾರ್ಸಿಲೋನಾದ ಬ್ರಿಯಾನ್ಸ್‌ 2 ಜೈಲಿನಲ್ಲಿ ದಾಖಲಾಗಿದ್ದ 75 ವರ್ಷದ ವಯಸ್ಸಿನ ಮ್ಯಾಕ್‌ಅಫಿ ’ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಸ್ಪೇನ್‌ನ ಈಶಾನ್ಯದಲ್ಲಿರುವ ಕೆಟೋಲಿನಾ ಪ್ರದೇಶದ ಜೈಲಿನ ವಕ್ತಾರೆಯೊಬ್ಬರು ತಿಳಿಸಿದ್ದು, ಈ ಕುರಿತಂತೆ ಹೆಚ್ಚು ವಿವರಗಳನ್ನು ಅವರು ಕೊಡಲು ನಿರಾಕರಿಸಿದ್ದಾರೆ.

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಐತಿಹಾಸಿಕ ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್, ಡೀಸೆಲ್ ದರ

ಕಳೆದ ಅಕ್ಟೋಬರ್‌‌ನಲ್ಲಿ ಇಸ್ತಂಬುಲ್‌ಗೆ ವಿಮಾನವೇರಲಿದ್ದ ಮ್ಯಾಕ್‌ಅಫಿರನ್ನು ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಸ್ಪೇನ್‌ನ ಅಧಿಕಾರಿಗಳು ಬಂಧಿಸಿದ್ದರು.

ತಮ್ಮ ಜೀವನಚರಿತ್ರೆಯ ಮಾರಾಟ, ಕ್ರಿಪ್ಟೋಕರೆನ್ಸಿ ವ್ಯಾಪಾರ ಹಾಗೂ ಕನ್ಸಲ್ಟಿಂಗ್ ಕೆಲಸಗಳಿಂದ ಬಂದ $12 ದಶಲಕ್ಷದಷ್ಟು ಆದಾಯದ ಮೇಲೆ 2014-2018ರ ಅವಧಿಯಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸದೇ ಇರುವ ಆಪಾದನೆಯನ್ನು ಮ್ಯಾಕ್‌ಅಫಿ ಎದುರಿಸುತ್ತಿದ್ದಾರೆ. ಒಂದು ವೇಳೆ ಈ ಆಪಾದನೆಯಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದ್ದಲ್ಲಿ 30 ವರ್ಷಗಳ ಸೆರೆವಾಸ ಅನುಭವಿಸಬೇಕಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...