alex Certify ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ’ ಪ್ರದರ್ಶಿಸಿದ ಬಿಜೆಪಿ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ’ ಪ್ರದರ್ಶಿಸಿದ ಬಿಜೆಪಿ ನಾಯಕ

ಲಖನೌ: ಉತ್ತರ ಪ್ರದೇಶ ಬಿಜೆಪಿ ಕಾರ್ಯದರ್ಶಿ ಅಭಿಜತ್ ಮಿಶ್ರಾ ಅವರು ಶನಿವಾರ ನಗರದಲ್ಲಿ ಸುಮಾರು 80 ಕಾಲೇಜು ವಿದ್ಯಾರ್ಥಿನಿಯರಿಗಾಗಿ ವಿವಾದಾತ್ಮಕ ಚಲನಚಿತ್ರ ʼದಿ ಕೇರಳ ಸ್ಟೋರಿʼ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಈ ಕ್ರಮವನ್ನು ರಾಜ್ಯದ ವಿರೋಧ ಪಕ್ಷಗಳು ಟೀಕಿಸಿವೆ.

ಬಿಜೆಪಿ ನಾಯಕ ಅಭಿಜತ್ ಮಿಶ್ರಾ ಸಿನಿಮಾ ಪ್ರದರ್ಶನಕ್ಕಾಗಿ ಇಡೀ ಚಿತ್ರಮಂದಿರವನ್ನು ಕಾಯ್ದಿರಿಸಿದ್ದರು. ಲವ್ ಜಿಹಾದ್‌ ಅನ್ನು ತಡೆಯಲು ಯುವತಿಯರಿಗೆ ಚಲನಚಿತ್ರವನ್ನು ತೋರಿಸಬೇಕು ಎಂದು ಅವರು ಹೇಳಿದ್ರು.

ಅದಾ ಶರ್ಮಾ ನಟಿಸಿರುವ ಈ ಚಿತ್ರವು ಕೇರಳದ ಯುವತಿಯರ ಸುತ್ತ ಕೇಂದ್ರೀಕರಿಸಿದೆ. ಹಿಂದೂ ಯುವತಿಯರನ್ನು ಮತಾಂತರಗೊಳ್ಳಲು ಮತ್ತು ಐಸಿಸ್ ಉಗ್ರ ಸಂಘಟನೆಗೆ ಸೇರಲು ಬಲವಂತಪಡಿಸಲಾಗಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹೀಗಾಗಿ ಹಿಂದೂ ಹೆಣ್ಮಕ್ಕಳ ಉಳಿಸಲು ʼದಿ ಕೇರಳ ಸ್ಟೋರಿʼ ನೋಡಬೇಕು. ಭಯೋತ್ಪಾದಕರು ಮತ್ತು ಲವ್ ಜಿಹಾದ್ ಅನ್ನು ಬೆಂಬಲಿಸುವ ಮತ್ತು ಕೇರಳ ಸ್ಟೋರಿಯನ್ನು ವಿರೋಧಿಸುವ ಪಕ್ಷಗಳನ್ನು ನಿಷೇಧಿಸಬೇಕು ಎಂದು ಮಿಶ್ರಾ ಆಗ್ರಹಿಸಿದ್ದಾರೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಬದಲು ತನ್ನ ರಾಜಕೀಯ ವಿಚಾರಗಳನ್ನು ಪ್ರಚಾರ ಮಾಡಲು ಚಲನಚಿತ್ರ ನಿರ್ಮಾಣದ ವೇದಿಕೆಯನ್ನು ಬಳಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಚಿತ್ರದ ಪ್ರದರ್ಶನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ವಕ್ತಾರ ಅಮೀಕ್ ಜಮೇಯ್, ಬಿಜೆಪಿ ತನ್ನ ಹೆಸರನ್ನು ಭಾರತೀಯ ನಾಜಿ ಪಕ್ಷ ಎಂದು ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪ್ರಚಾರ ಸಚಿವಾಲಯ ಎಂದು ಬದಲಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈ ರೀತಿಯ ಚಲನಚಿತ್ರಗಳು ಯಾರಿಗೂ ಹಾಗೂ ದೇಶಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಅವು ನಿರುದ್ಯೋಗ ಅಥವಾ ಹಣದುಬ್ಬರದ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬಿಜೆಪಿ ಯಾವಾಗಲೂ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ಚಲನಚಿತ್ರಗಳನ್ನು ಬಳಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಹೇಳಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...