ತಮ್ಮ ವಿಲಕ್ಷಣ ಡ್ರೆಸ್ಗಳ ಮೂಲಕವೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿದ್ದ ದುಷ್ಕರ್ಮಿಗಳ ತಂಡವೊಂದು ತಮಗೆ ಕಿರುಕುಳ ನೀಡಿದೆ ಎಂದು ಉರ್ಫಿ ಜಾವೇದ್ ಆರೋಪಿಸಿದ್ದಾರೆ.
ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಯಾಣಿಕರ ಫೋಟೋವನ್ನು ಶೇರ್ ಮಾಡಿದ್ದಾರೆ. ಇಲ್ಲಿರುವ ದುಷ್ಕರ್ಮಿಗಳು ನನಗೆ ಟೀಸ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಫೋಟೋಗಳಲ್ಲಿ ನಟಿ ಉರ್ಫಿ ಜಾವೇದ್ ತಮ್ಮ ಕೂದಲಿಗೆ ಕೆಂಪು ಬಣ್ಣ ಹಾಕಿರುವುದನ್ನು ಕಾಣಬಹುದಾಗಿದೆ.
ಇನ್ನು ಈ ಫೋಟೋಗಳ ಜೊತೆಯಲ್ಲಿ ಉರ್ಫಿ ಜಾವೇದ್ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ನಾನು ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಕಿರುಕುಳವನ್ನು ಎದುರಿಸಬೇಕಾಗಿ ಬಂತು. ಈ ವಿಡಿಯೋದಲ್ಲಿರುವ ಪುರುಷರ ಗುಂಪು ನನ್ನನ್ನು ನೋಡಿ ಆಡಿಕೊಂಡು ನಗುತ್ತಿದ್ದರು. ಇದನ್ನು ನಾನು ಪ್ರಶ್ನೆ ಮಾಡಿದ್ದಾಗ ಅದೇ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ನನ್ನ ಸ್ನೇಹಿತರು ಕುಡಿದಿದ್ದಾರೆ ಎಂದು ಹೇಳಿದರು.
ಕುಡಿದ ಅಮಲಿನಲ್ಲಿ ಮಹಿಳೆಯರೊಂದಿಗೆ ಈ ರೀತಿ ಅನುಚಿತ ವರ್ತನೆ ಸಹಿಸಲು ಸಾಧ್ಯವಿಲ್ಲ. ನಾನು ಪಬ್ಲಿಕ್ ಫಿಗರ್ ಇರಬಹುದು. ಹಾಗಂತ ಸಾರ್ವಜನಿಕ ಆಸ್ತಿ ನಾನಲ್ಲ ಎಂದಿದ್ದಾರೆ.
ಉರ್ಫಿ ಜಾವೇದ್ ಸಾಮಾನ್ಯವಾಗಿ ತಮ್ಮ ವೇಷ ಭೂಷಣಗಳ ಮೂಲಕವೇ ಗಮನ ಸೆಳೆಯುತ್ತಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಉರ್ಫಿ ಸಾಮಾನ್ಯವಾಗಿ ಕಾಣಿಸಿಕೊಳ್ತಿರ್ತಾರೆ. ಪಾಪ್ಗಳೊಂದಿಗೆ ಮಾತನಾಡುತ್ತಾ ಫೋಟೋಗೆ ಪೋಸ್ ಕೊಡುವುದು ಇವರ ನಿತ್ಯದ ಕೆಲಸ ಎಂಬಂತಾಗಿದೆ.