alex Certify ʼಒಮಿಕ್ರಾನ್ʼ ನಿಂದ ಗುಣಮುಖರಾದ ಬಳಿಕವೂ ಬಹುದಿನಗಳ ಕಾಲ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಒಮಿಕ್ರಾನ್ʼ ನಿಂದ ಗುಣಮುಖರಾದ ಬಳಿಕವೂ ಬಹುದಿನಗಳ ಕಾಲ ಕಾಡುತ್ತೆ ಈ ಸಮಸ್ಯೆ

ಕೋವಿಡ್ ಸೋಂಕಿಗೆ ಒಮ್ಮೆ ಪೀಡಿತರಾದಲ್ಲಿ ಚೇತರಿಸಿಕೊಂಡ ಬಳಿಕವೂ ಕೆಲವೊಂದು ರೋಗ ಲಕ್ಷಣಗಳು ಸುದೀರ್ಘಾವಧಿವರೆಗೂ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್‌-19ನ ಒಮಿಕ್ರಾನ್ ರೂಪಾಂತರಿಯು ಅತ್ಯಂತ ವ್ಯಾಪಕವಾಗಿ ಪಸರಿಸಬಲ್ಲದಾಗಿದ್ದು, ಈ ರೂಪಾಂತರಿಯ ಸ್ಪೈಕ್ ಪ್ರೋಟೀನ್‌ನಲ್ಲಿ 30ಕ್ಕೂ ಹೆಚ್ಚು ಮ್ಯೂಟೇಷನ್‌ಗಳು ಇರುವ ಕಾರಣ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದ ಮಂದಿಗೂ ಇದು ಅಂಟಿಕೊಳ್ಳುವ ಸಾಧ್ಯತೆ ಇದೆ.

Corona Update: 1705 ಜನರಿಗೆ ಸೋಂಕು, 30 ಮಂದಿ ಸಾವು; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಸೋಂಕುಪೀಡಿತರು ಚೇತರಿಸಿಕೊಳ್ಳುವ ವೇಳೆ ಮೂಗಿನಲ್ಲಿ ಸೋರಿಕೆ, ಡಯಾರಿಯಾ ಸೇರಿದಂತೆ ಆರೋಗ್ಯಕ್ಕೆ ಅನೇಕ ರೀತಿಯ ಹೊಡೆತಗಳನ್ನು ಒಮಿಕ್ರಾನ್ ಕೊಡುತ್ತದೆ ಎಂದು ತಜ್ಞರು ತಿಳಿಸಿದ್ದು, ಪೂರ್ಣವಾಗಿ ಚೇತರಿಸಿಕೊಂಡ ಬಳಿಕವೂ ಸುದೀರ್ಘಾವಧಿಯ ಸಮಸ್ಯೆಗಳು ಕಾಣುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

“ಕೋವಿಡ್ ಸೋಂಕಿನಿಂದ ಚೇತರಿಕೆ ಕಂಡ ಬಳಿಕ ಕಂಡು ಬರುವ ರೋಗ ಲಕ್ಷಣಗಳು ಬಹಳ ಮುಖ್ಯವಾಗಿದ್ದು, ಇವುಗಳನ್ನೂ ಸಹ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ ಎನ್ನುವ ಕೊಚ್ಚಿಯ ಅಮೃತಾ ಆಸ್ಪತ್ರೆಯ ವೈದ್ಯೆ ಡಾ. ಆನ್ ಮೇರಿ, “ಡೆಲ್ಟಾ ಸೋಂಕಿತರಿಗೆ ಹೋಲಿಸಿದಲ್ಲಿ ಒಮಿಕ್ರಾನ್‌ ಪೀಡಿತರಿಗೆ ಬರುವ ಬೆನ್ನು ನೋವು ಇನ್ನಷ್ಟು ತೀವ್ರವಾಗಿರಲಿದ್ದು, ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಒಮಿಕ್ರಾನ್ ಪೀಡಿತ ಮಂದಿಯಲ್ಲಿ ಅನೇಕರಿಗೆ ತೀವ್ರವಾದ ಬೆನ್ನು ನೋವು ಮತ್ತು ಸ್ನಾಯು ನೋವುಗಳು ಕಾಣಿಸಿಕೊಂಡಿದ್ದು, ಯೋಚಿಸಬೇಕಾದ ಸಂಗತಿಯಾಗಿದೆ” ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...