ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಅಕ್ವೇರಿಯಂನ ಟ್ವಿಟರ್ ಖಾತೆಯಲ್ಲಿ ಈ ದೃಶ್ಯ ಶೇರ್ ಮಾಡಲಾಗಿದೆ. ನಾನ್ಟುಕೆಟ್ ದ್ವೀಪದಿಂದ 40 ಮೈಲಿ ದೂರದಲ್ಲಿ ಈ ತಿಮಿಂಗಿಲಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.
ವಿಜ್ಞಾನಿಗಳ ತಂಡದ ಕ್ಯಾಥರೀನ್ ಮೆಕೆನ್ನಾ ಕಣ್ಣಿಗೆ ಈ ತಿಮಿಂಗಿಲಗಳು ಮೊದಲು ಬಿದ್ದಿವೆ. ಈ ತಿಮಿಂಗಿಲಗಳ ಪೈಕಿ ಒಂದು ವಯಸ್ಕ ಗಂಡು, ಒಂದು ವಯಸ್ಕ ಹೆಣ್ಣು ಹಾಗೂ ಮತ್ತೆರಡು ಆಡುವ ವಯಸ್ಸಿನ ಮರಿ ತಿಮಿಂಗಿಲಗಳಾಗಿವೆ ಎನ್ನಲಾಗಿದೆ.