ಕೋವಿಡ್-19 ಸೋಂಕಿನ ಕಾಟದೊಂದಿಗೆ ಸಾಂಕ್ರಮಿಕದ ನಂತರದ ಪರಿಣಾಮಗಳು ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಪೈಕಿ 40% ಮಂದಿಯಲ್ಲಿ ಕಂಡು ಬರುತ್ತಿದೆ.
ಅನಗತ್ಯವಾಗಿ ಸ್ಟಿರಾಯ್ಡ್‌ಗಳನ್ನು ಕೋವಿಡ್ ಪೀಡಿತರ ಶುಶ್ರೂಷೆಗೆ ಬಳಸುತ್ತಿರುವ ಕಾರಣ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕೋವಿಡ್ ನಂತರದ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೈದರಾಬಾದ್ ಮೂಲದ ಏಷ್ಯನ್ ಗ್ಯಾಸ್ಟ್ರೋಎಂಟರಾಲಜಿ ವೈದ್ಯಕೀಯ ಸಂಸ್ಥೆ (ಎಐಜಿ) ತಿಳಿಸಿದೆ.
ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮಂದಿಯ ಪೈಕಿ 74% ಜನರು ಸ್ಟಿರಾಯ್ಡ್‌ಗಳನ್ನು ಪಡೆಯುತ್ತಿದ್ದು, 24% ಮಂದಿ ಆಮ್ಲಜನಕ ಪಡೆದಿದ್ದಾರೆ ಎಂದು ಮತ್ತೊಂದು ವಾಸ್ತವಾಂಶ ಬೆಳಕಿಗೆ ಬಂದಿದೆ.
’ಸೂಪರ್ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್ ರೋಷನ್
“ಸ್ಟಿರಾಯ್ಡ್‌ಗಳನ್ನು ಮನಬಂದಂತೆ ಬಳಸುವ ಕಾರಣ ಕೋವಿಡ್ ನಂತರದ ಸಂಕಷ್ಟಗಳು ತಲೆದೋರುತ್ತಿವೆ ಎಂಬುದು ನಮ್ಮ ಬಲವಾದ ಮಾತು. ಆಮ್ಲಜನಕದ ಅಗತ್ಯವಿರುವ ಮಂದಿಗೆ ಮಾತ್ರವೇ ಸ್ಟಿರಾಯ್ಡ್‌ಗಳನ್ನು ನೀಡಬೇಕು ಎಂದು ಮಾರ್ಗಸೂಚಿಗಳು ಸ್ಪಷ್ಟವಾಗಿ ತಿಳಿಸುತ್ತಿವೆ” ಎನ್ನುತ್ತಾರೆ ಎಐಜಿಯ ಚೇರ್ಮನ್ ಡಾ. ನಾಗೇಶ್ವರ ರೆಡ್ಡಿ.
ಶ್ವಾಸಕೋಶಗಳು ಫೈಬ್ರಿಯಾಸಿಸ್, ಆಟೋ ಇಮ್ಯೂನ್, ಹೃದಯ ಸಂಬಂಧಿ ಸಮಸ್ಯೆಗಳು, ನರ ಹಾಗೂ ಮೆದುಳು ಸಂಬಂಧ ಸಮಸ್ಯೆಗಳು ಕೋವಿಡ್ ನಂತರ ಕಂಡು ಬರುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾದದ್ದಾಗಿವೆ. ಕೋವಿಡ್ ಚಿಕಿತ್ಸೆ ಪಡೆದ ಒಂದು ಕೋಟಿಯಷ್ಟು ಮಂದಿ ಮೇಲ್ಕಂಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.