ಮಾರಣಾಂತಿಕ ಕೊರೋನಾ ವೈರಸ್ ಹರಡುತ್ತಲೇ ಇದ್ದರೂ ಹಲವರು ಇದನ್ನು ಅಷ್ಟೇನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಶ್ವದೆಲ್ಲೆ ಲಸಿಕೆ ವಿರೋಧಿ ಹಾಗೂ ಮಾಸ್ಕ್ ವಿರೋಧಿ ಜನರು ಇರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಾಮಾಜಿಕ ಮಾಧ್ಯಮದಲ್ಲೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಶಾಲಾ-ಕಾಲೇಜಿಗೆ ಹೋಗುವವರು ತಮ್ಮ ಸ್ನೇಹಿತರೊಂದಿಗೆ ಏನು ಚರ್ಚಿಸುತ್ತಾರೆ ಸಾಮಾಜಿಕ ಜಾಲತಾಣದಲ್ಲಿ ಏನು ಬರೆಯುತ್ತಾರೆ ಎಂಬ ಬಗ್ಗೆ ಜಾಗರೂಕರಾಗಿರಬೇಕು.
BIG NEWS: ಬೆಂಗಳೂರು 338 ಸೇರಿ ರಾಜ್ಯದಲ್ಲಿಂದು 1102 ಜನರಿಗೆ ಕೊರೋನಾ, 17 ಮಂದಿ ಸಾವು –ಇಲ್ಲಿದೆ ಡಿಟೇಲ್ಸ್
ಹೌದು, ಇಲ್ಲೊಂದು ವಿಶ್ವವಿದ್ಯಾಲಯವು ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ನೋ ಎಂಟ್ರಿ ಎಂದು ಹೇಳುತ್ತಿದೆ. ಕೋವಿಡ್ ಅನ್ನು ಗಂಭೀರವಾಗಿ ಪರಿಗಣಿಸದ ಕಾರಣ ವಿವಿಯು ತನಗೆ ಆನ್ ಲೈನ್ ತರಗತಿ ಪ್ರವೇಶ ನಿಷೇಧಿಸಿದೆ ಎಂದು ನ್ಯೂಜೆರ್ಸಿಯ ವಿದ್ಯಾರ್ಥಿ ಲೋಗನ್ ಹಲ್ಲರ್ ಹೇಳಿದ್ದಾನೆ.
ಕುತೂಹಲಕಾರಿ ಅಂಶವೆಂದರೆ ಲೋಗನ್ ಲಸಿಕೆ ತೆಗೆದುಕೊಳ್ಳದ ಕಾರಣ ರಟ್ಜರ್ಸ್ ವಿಶ್ವವಿದ್ಯಾಲಯದಲ್ಲಿ ಆನ್ ಲೈನ್ ತರಗತಿಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ತುಂಬಾ ತೀವ್ರವಾಗಿರಬಹುದು. ಆದರೆ 22 ವರ್ಷದ ವಿದ್ಯಾರ್ಥಿ ಲೋಗನ್ ಮಾತ್ರ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಚಿಂತಿಸಿಲ್ಲವಂತೆ. ಮನೆಯಿಂದಲೇ ವ್ಯಾಸಂಗ ಮಾಡುತ್ತಿದ್ದರೂ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಲಸಿಕೆ ತೆಗೆದುಕೊಳ್ಳಲೇ ಬೇಕು ಎಂದು ವಿವಿ ಹೇಳಿದೆ.