alex Certify BIG NEWS: ಬೆಂಗಳೂರು 338 ಸೇರಿ ರಾಜ್ಯದಲ್ಲಿಂದು 1102 ಜನರಿಗೆ ಕೊರೋನಾ, 17 ಮಂದಿ ಸಾವು –ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು 338 ಸೇರಿ ರಾಜ್ಯದಲ್ಲಿಂದು 1102 ಜನರಿಗೆ ಕೊರೋನಾ, 17 ಮಂದಿ ಸಾವು –ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1102 ಜನರಿಗೆ ಸೋಂಕು ತಗುಲಿದ್ದು, 1458 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17 ಸೋಂಕಿತರು ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,58,090 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,458 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 29,03,547 ಜನ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ 17,058 ಸಕ್ರಿಯ ಪ್ರಕರಣಗಳು ಇವೆ. ಇವತ್ತು 1,69,621 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 0.64 ರಷ್ಟು ಇದೆ.

ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 338 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.  ಬೆಂಗಳೂರಿನಲ್ಲಿ ಇವತ್ತು 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 7119 ಸಕ್ರಿಯ ಪ್ರಕರಣಗಳಿದ್ದು, ಇಂದು 277 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಗಳಲ್ಲಿ ಸೋಂಕಿತರ ಮಾಹಿತಿ:

ಬಾಗಲಕೋಟೆ 0, ಬೆಳಗಾವಿ 4, ಬೀದರ್ 0, ಚಿಕ್ಕಬಳ್ಳಾಪುರ 5, ಧಾರವಾಡ 5, ಗದಗ 0, ಹಾವೇರಿ 2, ಕೊಪ್ಪಳ 4, ರಾಯಚೂರು 3, ರಾಮನಗರ 4, ವಿಜಯಪುರ 1, ಯಾದಗಿರಿ 0, ಬೆಂಗಳೂರು ನಗರ 338, ಚಿಕ್ಕಮಗಳೂರು 51, ದಕ್ಷಿಣಕನ್ನಡ 200, ಹಾಸನ 51, ಮೈಸೂರು 64, ಶಿವಮೊಗ್ಗ 55, ಉಡುಪಿ 133, ಉತ್ತರಕನ್ನಡ 40 ಹೊಸ ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 5, ದಕ್ಷಿಣ ಕನ್ನಡ 3, ಮೈಸೂರು 2, ಶಿವಮೊಗ್ಗ 1, ತುಮಕೂರು 1, ಉತ್ತರಕನ್ನಡ 4 ಸೇರಿ ರಾಜ್ಯದಲ್ಲಿ ಇಂದು 17 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...