alex Certify ಫಿಫಾ ವಿಶ್ವ ಕಪ್​ನಲ್ಲಿ ಭಾರತದ ಧ್ವಜ ಹಿಡಿದ ಅರ್ಜೆಂಟೈನಾ ಯುವತಿ: ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ವಿಶ್ವ ಕಪ್​ನಲ್ಲಿ ಭಾರತದ ಧ್ವಜ ಹಿಡಿದ ಅರ್ಜೆಂಟೈನಾ ಯುವತಿ: ಇದರ ಹಿಂದಿದೆ ಈ ಕಾರಣ

ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಜ್ವರ ಹೆಚ್ಚಾಗಿದೆ. ಪ್ರಪಂಚದಾದ್ಯಂತದ ಸಾವಿರಾರು ಫುಟ್​ಬಾಲ್​ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಮಧ್ಯಪ್ರಾಚ್ಯ ದೇಶದಲ್ಲಿ ಜಮಾಯಿಸಿದ್ದಾರೆ.

ಜನರು ತಮ್ಮ ದೇಶದ ತಂಡಗಳನ್ನು ಹುರಿದುಂಬಿಸಲು ದೂರದೂರದಿಂದ ಪ್ರಯಾಣಿಸಿದ್ದಾರೆ. ಇವರಲ್ಲಿ ಹೈಲೈಟ್​ ಆಗಿರುವವರು ಈ ವಿಡಿಯೋ.
ವಿಡಿಯೋದಲ್ಲಿ ಅರ್ಜೆಂಟೀನಾದ ಧ್ವಜವನ್ನು ಸುತ್ತಿಕೊಂಡಿರುವ ಕೇರಳದ ವ್ಯಕ್ತಿಯನ್ನು ನೋಡಬಹುದು.

ಆತನ ಪಕ್ಕದಲ್ಲಿ ನಿಂತಿರುವ ಅರ್ಜೆಂಟೀನಾದ ಯುವತಿ ತನ್ನ ಹೆಗಲ ಮೇಲೆ ಭಾರತದ ಧ್ವಜವನ್ನು ಸುತ್ತಿಕೊಂಡಿದ್ದಾಳೆ. ಮಲಯಾಳಂನಲ್ಲಿ ಮಾತನಾಡಿರುವ ಇವರು, ತಾವು ಹೀಗೆ ಏಕೆ ಎರಡೂ ರಾಷ್ಟ್ರಧ್ವಜಗಳನ್ನು ಹೊಂದಿದ್ದೇವೆ ಎಂದು ವಿವರಿಸಿದ್ದು, ಅದು ನೆಟ್ಟಿಗರ ಹೃದಯ ಗೆದ್ದಿದೆ.

ಅರ್ಜೆಂಟೀನಾ ಬಗ್ಗೆ ಭಾರತೀಯರು ಹೊಂದಿರುವ ಪ್ರೀತಿಗೆ ಪ್ರತಿಕ್ರಿಯೆಯಾಗಿ ಹೀಗೆ ತಾವು ಭಾರತದ ಧ್ವಜವನ್ನು ಹಿಡಿದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಈ ವ್ಯಕ್ತಿಗಳ ಪ್ರೀತಿಗೆ ಭಾರತೀಯರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಭಾರತದ ಬಗ್ಗೆ ವಿದೇಶಿಗರು ಹೇಗೆ ಪ್ರೀತಿ ಹೊಂದಿದ್ದಾರೆ ಹಾಗೂ ಭಾರತ ತೋರುವ ಪ್ರೀತಿಗೆ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬ ಬಗ್ಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...