ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರದೇ ಇರುವ ಕಾರಣ ಬೇಸತ್ತ ಮಹಿಳೆಯರ ಗುಂಪೊಂದು ಈ ರಸ್ತೆ ಮೇಲೆಯೇ ಕ್ಯಾಟ್ ವಾಕ್ ಮಾಡಿದ ಘಟನೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಜರುಗಿದೆ
ಭೋಪಾಲ್‌ನ ದುಬಾರಿ ಏರಿಯಾ ದಾನಿಶ್ ನಗರದಲ್ಲಿ ಈ ಕ್ಯಾಟ್‌ವಾಕ್ ಪ್ರತಿಭಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋಗಳು ವೈರಲ್ ಆಗಿವೆ. ಮೂರು ದಶಕಗಳಿಂದ ಭಾರೀ ಬೆಲೆ ತೆತ್ತು ಪ್ಲಾಟ್‌ಗಳನ್ನು ಖರೀದಿ ಮಾಡಿದ್ದಲ್ಲದೇ ತೆರಿಗೆಗಳನ್ನೂ ಪಾವತಿ ಮಾಡಿದ ಮೇಲೂ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಪ್ರತಿಭಟನೆ ಆಯೋಜಿಸಿದ ಅಂಶು ಗುಪ್ತಾ ಆಪಾದನೆ ಮಾಡಿದ್ದಾರೆ.
“ನಮ್ಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ನಮ್ಮ ಕೊರತೆಗಳ ಬಗ್ಗೆ ಕಿವುಡುತನ ತೋರುತ್ತಿರುವ ಕಾರಣ ನಾವು ಗುಂಡಿ ಬಿದ್ದ ದಾನಿಶ್ ನಗರದ ರಸ್ತೆಗಳ ಮೇಲೆ ಕ್ಯಾಟ್‌ವಾಕ್ ಆಯೋಜಿಸಿದ್ದೇವೆ. ನಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ನಾವು ಯಾವುದೇ ತೆರಿಗೆಗಳನ್ನು ಕಟ್ಟುವುದಿಲ್ಲ” ಎಂದು ಗುಪ್ತಾ ತಿಳಿಸಿದ್ದಾರೆ.
ಸ್ಕೈ ಡೈವಿಂಗ್ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ
’ಅಮೆರಿಕಕ್ಕಿಂತಲೂ ಉತ್ತಮವಾದ ರಸ್ತೆಗಳು ಮಧ್ಯ ಪ್ರದೇಶದಲ್ಲಿವೆ’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2017ರಲ್ಲಿ ಹೇಳಿದ್ದ ಹೇಳಿಕೆಯ ಭಿತ್ತಿ ಪತ್ರಿಕೆಗಳನ್ನು ಹಿಡಿದ ಮಹಿಳೆಯರು ಮತ್ತು ಮಕ್ಕಳು, ”ಹೀಗೆ ಮುರಿದು ಬಿದ್ದ, ಗುಂಡಿ ಬಿದ್ದ ರಸ್ತೆಗಳು ವಾಷಿಂಗ್ಟನ್ ರಸ್ತೆಗಳಿಗಿಂತ ಉತ್ತಮವಾಗಿವೆಯೇ?” ಎಂದು ಭಿತ್ತಿ ಪತ್ರವೊಂದರಲ್ಲಿ ಆಳುವ ವರ್ಗವನ್ನು ಅಣಕ ಮಾಡಲಾಗಿದೆ.