ಸೂರ್ಯ ಮುಳುಗಿದಾಗ ಮಾತ್ರ ರಾತ್ರಿ ಸಂಭವಿಸುತ್ತದೆ ಎಂಬುದು ನಮಗೆಲ್ಲಾ ತಿಳಿದಿರೋ ಸಂಗತಿ. ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಸೂರ್ಯ ಅಸ್ತಮಿಸುವುದೇ ಇಲ್ಲಿ. ಅಲ್ಲಿ ವಾಸಿಸುವ ಜನರು ಅದಕ್ಕೆ ತಕ್ಕಂತೆ ಹಗಲು ರಾತ್ರಿಯನ್ನು ವಿಭಜಿಸಿಕೊಂಡಿದ್ದಾರೆ. ಇಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ನೋಡಬಹುದು. ಇದನ್ನು “ಮಿಡ್‌ನೈಟ್ ಸನ್” ಎಂದು ಕರೆಯಲಾಗುತ್ತದೆ.
ನಾರ್ವೆ
ನಾರ್ವೆಯಲ್ಲಿ ಕೂಡ ಸೂರ್ಯಾಸ್ತವಾಗುವುದಿಲ್ಲ. ಆರ್ಕ್ಟಿಕ್ ವೃತ್ತದಲ್ಲಿ ಅದರ ಸ್ಥಳದಿಂದಾಗಿ, ಮೇ ನಿಂದ ಜುಲೈ ಅಂತ್ಯದವರೆಗೆ ಸರಿಸುಮಾರು 76 ದಿನಗಳವರೆಗೆ ನಾರ್ವೆಯಲ್ಲಿ ಸೂರ್ಯಾಸ್ತ ಸಂಭವಿಸುವುದಿಲ್ಲ.
ಸ್ವೀಡನ್
ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಸೂರ್ಯನು ಸ್ವೀಡನ್‌ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಅಸ್ತಮಿಸುತ್ತಾನೆ ಮತ್ತು ಸುಮಾರು 4 ಗಂಟೆಗೆ ಉದಯಿಸುತ್ತಾನೆ. ಇಲ್ಲಿ ಇದು 6 ತಿಂಗಳ ಕಾಲ ನಿರಂತರವಾಗಿ ಸಂಭವಿಸಬಹುದು.
ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್‌ನ ಉತ್ತರದ ಭಾಗಗಳಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ಸಹ ಕಾಣಬಹುದು. ಇಲ್ಲಿ ಬೇಸಿಗೆಯಲ್ಲಿ ಸುಮಾರು 73 ದಿನಗಳ ಕಾಲ ಸೂರ್ಯ ಮುಳುಗುವುದಿಲ್ಲ. ಚಳಿಗಾಲದಲ್ಲಿ ಇಲ್ಲಿ ಸೂರ್ಯನ ಬೆಳಕು ಇರುವುದಿಲ್ಲ.
ಐಸ್ಲ್ಯಾಂಡ್
ಜೂನ್ ತಿಂಗಳಿನಲ್ಲಿ ಯುರೋಪಿನ ಈ ದ್ವೀಪ ದೇಶದಲ್ಲಿ ಬಹುತೇಕ ರಾತ್ರಿಯೇ ಇರುವುದಿಲ್ಲ. ಆಕಾಶದಲ್ಲಿ ದಿಗಂತದ ಮೇಲೆ ಸ್ವಲ್ಪ ಸಮಯದವರೆಗೆ ಸೂರ್ಯ ಅಸ್ತಮಿಸುವುದನ್ನು ನೋಡಬಹುದು, ಆದರೆ ಅಲ್ಲಿ ನಿಜವಾಗಿ ಕತ್ತಲೆಯಾಗುವುದಿಲ್ಲ.
ಅಲಾಸ್ಕಾ
ಅಮೆರಿಕದ ಈ ಉತ್ತರ ರಾಜ್ಯದಲ್ಲಿ ಮೇ ಅಂತ್ಯದಿಂದ ಜುಲೈ ಮಧ್ಯದವರೆಗೆ ಮಧ್ಯರಾತ್ರಿಯಲ್ಲೂ ಸೂರ್ಯನನ್ನು ನೋಡಬಹುದು. ಅಲಾಸ್ಕಾದ ಉತ್ತರ ಪ್ರದೇಶಗಳಲ್ಲಿ ಸೂರ್ಯ ಸುಮಾರು 80 ದಿನಗಳವರೆಗೆ ಅಸ್ತಮಿಸುವುದಿಲ್ಲ.
ಕೆನಡಾ
ಕೆನಡಾದ ಉತ್ತರ ಪ್ರದೇಶಗಳಲ್ಲಿ ವಿಶೇಷವಾಗಿ ನುನಾವುಟ್‌ನಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯನಿರುತ್ತಾನೆ. ಜೂನ್ ಅಂತ್ಯದವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ.