ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಾರ್ಹ ಮತ್ತು ನಮಗೆಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಶಾಲೆಯಲ್ಲಿನ ಪರೀಕ್ಷೆಯ ಪೇಪರ್‌ಗಳನ್ನು ಪರಸ್ಪರ ಇಣುಕಿ ನೋಡುವುದು ಮಾಮೂಲು. ನಮ್ಮಲ್ಲಿ ಕೆಲವರು ಪರೀಕ್ಷಾ ಹಾಲ್‌ಗೆ ಸಣ್ಣ ಚಿಟ್‌ಗಳನ್ನು ತೆಗೆದುಕೊಂಡು ಹೋದರೆ ಇನ್ನು ಕೆಲವರು ಏನೇನೋ ಟೆಕ್ನಿಕ್ ಉಪಯೋಗಿಸುತ್ತಿರುವುದು ನಡೆಯುತ್ತಿದೆ.
ಇವೆಲ್ಲವನ್ನೂ ಪತ್ತೆ ಹಚ್ಚುವ ಕಾರ್ಯ ಸಾಗುತ್ತಿರುವ ನಡುವೆಯೇ ಹೊಸ ಹೊಸ ಕಾಪಿ ಆವಿಷ್ಕಾರಗಳೂ ನಡೆಯುತ್ತಿವೆ. ಅಂಥದ್ದೇ ಒಂದು ಹೊಸ ಆವಿಷ್ಕಾರದ ವಿಡಿಯೋ ಈಗ ವೈರಲ್ ಆಗಿದೆ. ಸೃಜನಶೀಲ ಮೋಸದ ತಂತ್ರ ಇದಾಗಿದೆ.
ಸುಮಾರು 8 ಸೆಕೆಂಡ್‌ಗಳ ಅವಧಿಯ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಪೆನ್ ಹಿಡಿದುಕೊಂಡಿರುವುದನ್ನು ನೋಡಬಹುದು. ನಂತರ ಒಂದು ಬ್ಯಾಗ್ ಅಲ್ಲಿ ಕಾಣಿಸುತ್ತದೆ. ಇದು ವರ್ಣರಂಜಿತ ಪೆನ್ನುಗಳ ಗುಂಪನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ಅದು ಕೇವಲ ಪೆನ್ ಅಲ್ಲ, ಬದಲಿಗೆ ಮೊಬೈಲ್‌ನ ವಾಲ್‌ಪೇಪರ್ !
ವ್ಯಕ್ತಿಯು ಫೋನ್ ಅನ್ನು ಸ್ಪರ್ಶಿಸಿದಾಗ, ಅದು ಕಾಗದದ ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡಿರುವ ಫೋನ್‌ನ ಗ್ಯಾಲರಿಯನ್ನು ತೋರಿಸುತ್ತದೆ. ಈ ತಂತ್ರವು ಆನ್‌ಲೈನ್‌ನಲ್ಲಿ ಅನೇಕ ಜನರ ಗಮನವನ್ನು ಸೆಳೆಯುತ್ತಿದೆ. ಟ್ವಿಟ್ಟರ್‌ನಲ್ಲಿ ಅನೇಕ ಜನರು ಈ ವಿಡಿಯೋದ ಹಿಂದಿನ ಜಾಣ್ಮೆಯನ್ನು ಶ್ಲಾಘಿಸಿದ್ದರೆ ಇಂಥ ಮೋಸ ಸಲ್ಲದು ಎಂದು ಹಲವರು ಹೇಳಿದ್ದಾರೆ.
https://twitter.com/BornAKang/status/1598714453163245575?ref_src=twsrc%5Etfw%7Ctwcamp%5Etweetembed%7Ctwterm%5E1598714453163245575%7Ctwgr%5E2f0efc4ee7a7b07e4be48fc9fbb40615be0e3496%7Ctwcon%5Es1_&ref_url=https%3A%2F%2Fwww.timesnownews.com%2Fviral%2Fcheating-tricks-in-exam-unique-way-of-cheating-viral-video-article-96016405