ಮೋದಿ ಸರ್ಕಾರದ ನೂತನ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಂತೆಯೇ ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಿದೆ.
@rajeev_mp ಎಂದು ಇದ್ದ ಹೆಸರನ್ನ @Rajeev_GoI ಎಂದು ಬದಲಾಯಿಸಿಕೊಳ್ಳುತ್ತಿದ್ದಂತೆಯೇ ಟ್ವಿಟರ್ ಅವರಿಗೆ ಈ ಹಿಂದೆ ನೀಡಿದ್ದ ಬ್ಲೂ ಟಿಕ್ ಮಾರ್ಕ್ನ್ನು ಅಳಿಸಿ ಹಾಕಿದೆ. ಕೆಲ ಗಂಟೆಗಳ ಬಳಿಕ ಈ ಬ್ಲೂ ಟಿಕ್ ಮಾರ್ಕ್ನ್ನು ಕಂಪನಿ ಮರುಸ್ಥಾಪಿಸಿದೆ.
BIG NEWS: ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿ
ಇನ್ನು ಈ ಯಡವಟ್ಟಿಗೆ ಸಬೂಬು ನೀಡಿರುವ ಟ್ವಿಟರ್ ಸಂಸ್ಥೆ, ಬ್ಲೂ ಟಿಕ್ ಖಾತೆಯನ್ನ ಹೊಂದಿರುವ ವ್ಯಕ್ತಿಯು ತನ್ನ ಯೂಸರ್ ನೇಮ್ನ್ನು ಬದಲಾವಣೆ ಮಾಡಿದಲ್ಲಿ ಬ್ಲೂ ಟಿಕ್ ಮಾರ್ಕ್ ತನ್ನಿಂದ ತಾನಾಗಿಯೇ ಅಳಿಸಿ ಹೋಗಲಿದೆ ಎಂದು ಹೇಳಿದೆ.