alex Certify ಕೇಂದ್ರ ಗೃಹ ಸಚಿವರ ಪದಕ; ಕರ್ನಾಟಕದ 5 ಪೊಲೀಸ್ ಅಧಿಕಾರಿಗಳು ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಗೃಹ ಸಚಿವರ ಪದಕ; ಕರ್ನಾಟಕದ 5 ಪೊಲೀಸ್ ಅಧಿಕಾರಿಗಳು ಆಯ್ಕೆ

ನವದೆಹಲಿ: ಕೇಂದ್ರ ಗೃಹ ಸಚಿವರ ಪದಕಕ್ಕೆ ಈ ಬಾರಿ 140 ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ರಾಜ್ಯದ 5 ಪೊಲೀಸರು ಆಯ್ಕೆಯಾಗಿದ್ದಾರೆ.

ತನಿಖೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ನೀಡಲಾಗುವ ಕೇಂದ್ರ ಗೃಹ ಸಚಿವರ ಪದಕವನ್ನು 2018ರಂದ ನೀಡಲಾಗುತ್ತಿದೆ. ಈ ಬಾರಿ 140 ಪೊಲೀಸ್ ಅಧಿಕಾರಿಗಳಿಗೆ ಈ ಪದಕ ನೀಡಲಾಗುತ್ತಿದ್ದು, ರಾಜ್ಯದ ಐವರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

15 ಸಿಬಿಐ, 12ಎನ್ ಐಎ ಹಾಗೂ ಉತ್ತರ ಪ್ರದೇಶದ 10, ಕೇರಳ ಹಾಗೂ ರಾಜಸ್ಥಾನದಿಂದ 9, ತಮಿಳುನಾಡಿನ 8, ಮಧ್ಯಪ್ರದೇಶದ 7 ಗುಜರಾತ್ ನ 6 ಹಾಗೂ ಕರ್ನಾಟಕದ 5 ಪೊಲೀಸ್ ಅಧಿಕಾರಿಗಳು ಸೇರಿದಂತೆ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಪದಕ ಪುರಸ್ಕೃತರಲ್ಲಿ 22 ಮಹಿಳಾ ಅಧಿಕಾರಿಗಳು ಇದ್ದಾರೆ ಎಂಬುದು ವಿಶೇಷ.

ಆಯ್ಕೆಯಾದ ಕರ್ನಾಟಕದ ಪೊಲೀಸರು:
ಶಂಕರ್ ಎಂ.ರಾಗಿ-ಡಿವೈಎಸ್ ಪಿ, ರಾಮಪ್ಪ ಗುತ್ತೇದಾರ್ – ನಿರೀಕ್ಷಕರು ತಾವರೆಕೆರೆ ಪೊಲೀಸ್ ಠಾಣೆ-ರಾಮನಗರ, ಶಿವಸ್ವಾಮಿ ಸಿ.ಬಿ. ಪೊಲೀಸ್ ಇನ್ಸ್ ಪೆಕ್ಟರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆ-ಬೆಂಗಳೂರು, ರುದ್ರೇಗೌಡ ಆರ್.ಪಾಟೀಲ್ ಪೊಲೀಸ್ ಇನ್ಸ್ ಪೆಕ್ಟರ್ ವಿನೋಬಾನಗರ-ಶಿವಮೊಗ್ಗ, ಪಿ.ಸುರೇಶ್ ಪೊಲೀಸ್ ಇನ್ಸ್ ಪೆಕ್ಟರ್ ಆರ್ ಎಂ ಸಿ ಯಾರ್ಡ್ – ಬೆಂಗಳೂರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...