ಲಿಂಗ ಸಮಾನತೆ ಎಂಬ ಹೆಸರು, ರಾಜಕೀಯ ನಾಯಕರು, ಗಣ್ಯರ ಬಾಯಲ್ಲಿ ಕೇಳಿ ಬರ್ತಿದೆ. ಹಾಗೆ ಪುಸ್ತಕದಲ್ಲಿ ಓದಲು ಸಿಗ್ತಿದೆ. ಆದ್ರೆ ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಯಾವುದೇ ಮಾತು, ಕಾರ್ಯರೂಪಕ್ಕೆ ಬಂದಿಲ್ಲ. ಈ ಮಧ್ಯೆ ಕೇರಳ ಶಾಲೆಯೊಂದು ಎಲ್ಲರ ಗಮನ ಸೆಳೆಸಿದೆ. ವಿದ್ಯಾರ್ಥಿಗಳಿಗೆ ಏಕರೂಪ ಸಮವಸ್ತ್ರವನ್ನು ಜಾರಿಗೆ ತರುವ ಮೂಲಕ ಲಿಂಗ ಸಮಾನತೆ ಸಾರಲು ಮುಂದಾಗಿದೆ. ರಾಜ್ಯ ಸರ್ಕಾರದಿಂದಲೂ, ಶಾಲೆಯ ಈ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.
ಲಿಂಗ ಸಮಾನತೆಗಾಗಿ ಶಾಲೆ ಮೊದಲ ಹೆಜ್ಜೆಯಾಗಿ, ಸಮವಸ್ತ್ರವನ್ನು ಏಕರೂಪಗೊಳಿಸಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಬಳಿಯ ವಳಯಂಚಿರಂಗಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಸಮವಸ್ತ್ರ ಜಾರಿಗೆ ಬಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ 3/4 ಶಾರ್ಟ್ಸ್ ಮತ್ತು ಶರ್ಟ್ ಕಡ್ಡಾಯವಾಗಿದೆ. ಈ ಶಾಲೆಯಲ್ಲಿ 754 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಹೊಸ ಡ್ರೆಸ್ ಕೋಡನ್ನು 2018 ರಲ್ಲಿ ಯೋಜಿಸಲಾಗಿತ್ತು. ಕೊರೊನಾ ನಂತರ ಶಾಲೆಯು ಪುನರಾರಂಭವಾದಾಗ ಎಲ್ಲ ವಿದ್ಯಾರ್ಥಿಗಳಿಗೆ ಈ ಸಮವಸ್ತ್ರವನ್ನು ನೀಡಲಾಗಿದೆ. ಮಕ್ಕಳಿಗೆ ಸಮಾನ ಸ್ವಾತಂತ್ರ್ಯ ನೀಡಬೇಕೆಂದು ಪಾಲಕ-ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ವಿ. ವಿವೇಕ್, 2018 ನಿರ್ಧಾರ ತೆಗೆದುಕೊಂಡಿದ್ದರು.
ಶಾಲೆಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ಬೆಂಬಲ ಸಿಕ್ಕಿದೆ. ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಸಿಗಲು ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮವಸ್ತ್ರವನ್ನು ಹೊಂದಬೇಕೆಂದು ನಾವು ಬಯಸಿದ್ದೇವೆ ಎಂದು ವಿವೇಕ್ ಹೇಳಿದ್ದಾರೆ.