alex Certify ಗಲೀಜಾದ ಸೀಟುಗಳ ಬಗ್ಗೆ ಪ್ರಯಾಣಿಕರ ಟ್ವೀಟ್; ತಕ್ಷಣವೇ ಸ್ಪಂದಿಸಿದ ಡಿಜಿಸಿಎ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಲೀಜಾದ ಸೀಟುಗಳ ಬಗ್ಗೆ ಪ್ರಯಾಣಿಕರ ಟ್ವೀಟ್; ತಕ್ಷಣವೇ ಸ್ಪಂದಿಸಿದ ಡಿಜಿಸಿಎ

ಬೆಂಗಳೂರು: ಗಲೀಜಾದ ಸೀಟುಗಳು ಮತ್ತು ಕ್ಯಾಬಿನ್ ಪ್ಯಾನೆಲ್‌ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಯಾಣಿಕರೊಬ್ಬರು ಫೋಟೋ ಸಹಿತ ಟ್ವೀಟ್ ಮಾಡಿದ ಬೆನ್ನಲ್ಲೇ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು (ಡಿಜಿಸಿಎ) ಸ್ಪೈಸ್‌ಜೆಟ್ ವಿಮಾನದ ಹಾರಾಟವನ್ನು ನಿರ್ಬಂಧಿಸಿದ್ದಲ್ಲದೆ, ಸಮಸ್ಯೆಗಳನ್ನು ಸರಿಪಡಿಸಿ ಹಾರಾಟ ನಡೆಸುವಂತೆ ಸೂಚಿಸಿದ್ದಾರೆ.

ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು ಗಲೀಜಾದ ಸೀಟುಗಳು ಮತ್ತು ಮುರಿದ ಕ್ಯಾಬಿನ್ ಪ್ಯಾನೆಲ್‌ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಟ್ವೀಟ್ ಅನ್ನು ಡಿಜಿಸಿಎ ಮತ್ತು ಇತರ ಸಂಬಂಧಿಸಿದ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು.

ಮುಟ್ಟಿನ ಸಮಯದಲ್ಲಿನ ರಕ್ತಸ್ರಾವಕ್ಕೆ ʼಆಡುಸೋಗೆʼಯಲ್ಲಿದೆ ಮದ್ದು

ಇದನ್ನು ಗಮನಿಸಿದ ಡಿಜಿಸಿಎ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಬೋಯಿಂಗ್ 737 ಬೆಂಗಳೂರಿಗೆ ಮರಳಿದ ತಕ್ಷಣವೇ ಅಧಿಕಾರಿಗಳು ಅನಿರೀಕ್ಷಿತವಾಗಿ ತಪಾಸಣೆ ನಡೆಸಿದರು. ರಿಪೇರಿಳು ಮತ್ತು ಸ್ವಚ್ಛತೆಯನ್ನು ನಡೆಸಿ, ಡಿಜಿಸಿಎದಿಂದ ಅನುಮತಿಯನ್ನು ಪಡೆದೇ ಹಾರಾಟ ಆರಂಭಿಸುವಂತೆ ಸೂಚಿಸಿದರು.

ಸ್ಪೈಸ್‌ಜೆಟ್ ತಕ್ಷಣವೇ ಈ ಎಲ್ಲ ನಿರ್ದೇಶನಗಳನ್ನು ಅನುಸರಿಸಿದ್ದರಿಂದ ವಿಮಾನದ ಹಾರಾಟ ಸುಗಮಗೊಂಡಿದೆ. ಏ. 19ರಂದು ಮಧ್ಯಾಹ್ನ 3.40ರ ಸುಮಾರಿಗೆ ಬೆಂಗಳೂರಿನಲ್ಲಿ ಇಳಿದ ಬೋಯಿಂಗ್ 737 ವಿಮಾನದ ದುರಸ್ತಿ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡು, ಏ. 20ರಂದು ಡಿಜಿಸಿಎ ಅಧಿಕಾರಿಗಳ ಅನುಮತಿ ಪಡೆದು ಹಾರಾಟವನ್ನೂ ಆರಂಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...