ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಮೆಗಾ ಐಪಿಒ ಕಳೆದ ವಾರ ಪೂರ್ಣಗೊಂಡಿದೆ. ಷೇರು ಮಾರುಕಟ್ಟೆಯ ಏರಿಳಿತ ಬಗ್ಗೆ ಚರ್ಚೆಯೂ ನಡೆಯುತ್ತಿದೆ.
ಈ ಬೆಳವಣಿಗೆ ಹೂಡಿಕೆದಾರರಿಗೆ ಕಳವಳವನ್ನುಂಟುಮಾಡಿದ್ದರೂ, ಫೆಬ್ರವರಿ, ಮಾರ್ಚ್ ನಲ್ಲಿ ಅದರ ಐಪಿಒ ಫೈಲಿಂಗ್ ಪ್ರಕ್ರಿಯೆಯಲ್ಲಿ ಸಲ್ಲಿಸಲಾದ ದಾಖಲೆಗಳ ವಿವರ ಭಾರತದ ವಿಮಾ ಉದ್ಯಮದ ಮತ್ತೊಂದು ಆಶ್ಚರ್ಯಕರ ಅಂಶವನ್ನು ಬಹಿರಂಗವಾಗಿದೆ.
ವಿಮಾ ಕ್ಷೇತ್ರದ ದೈತ್ಯ ಎನಿಸಿಕೊಂಡ ಎಲ್‌ಐಸಿ ಬಳಿ ಹಕ್ಕು ಪಡೆಯದೆ ಇರುವ (ಕ್ಲೈಂ ಮಾಡಿಕೊಳ್ಳದ) ಹಣದ ಮೊತ್ತ, 21,539.5 ಕೋಟಿ ರೂ., ಇದು ನಮ್ಮ ದೇಶದ ಒಂದಲ್ಲ ನಾಲ್ಕು ಸಚಿವಾಲಯಗಳ ಸಂಪೂರ್ಣ ಬಜೆಟ್‌ಗಿಂತ ದೊಡ್ಡದಾಗಿದೆ.
ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ
ಪಾಲಿಸಿ ಮೆಚ್ಯೂರ್ ಆದ ಬಳಿಕ ಹೂಡಿಕೆದಾರರಿಗೆ ತಲುಪದ ಹಣ 19,285.6 ಕೋಟಿಗಳು ಅಥವಾ ಒಟ್ಟು ಮೊತ್ತದ ಸುಮಾರು ಶೇ.90ರಷ್ಟಿದ್ದಾರೆ.
ಈ ಬೃಹತ್ ಬಾಕಿ ಮೊತ್ತದ ಪ್ರಮಾಣವು ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳ ಬಜೆಟ್‌ಗಿಂತ ಹೆಚ್ಚಿನದಾಗಿದೆ. ಇದು ನಾಗರಿಕ ವಿಮಾನಯಾನ ಸಚಿವಾಲಯ (10,667 ಕೋಟಿ ರೂ.), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (14,300 ಕೋಟಿ ರೂ.), ವಿದೇಶಾಂಗ ಸಚಿವಾಲಯ (17,250 ಕೋಟಿ ರೂ.) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಬಜೆಟ್‌ಗಿಂತಲೂ ದೊಡ್ಡದಾಗಿದೆ.
ಅಷ್ಟೇ ಅಲ್ಲ ಎರಡು ಗಗನ್ ಯಾನ್ ಮಿಷನ್‌ಗಳಿಗೆ ಧನಸಹಾಯ ಮಾಡಲು ಸಾಕಾಗುತ್ತದೆ. ಗಗನಯಾನದ ಮೊದಲ ಮಿಷನ್‌ನ ಸುಮಾರು 10,000 ಕೋಟಿ ರೂ. ವೆಚ್ಚ ಮಾಡಲಾಗಿತ್ತು.
ಆದರೆ, ನಿಯಮಗಳ ಪ್ರಕಾರ ಈ ಹಣವನ್ನು ಸರ್ಕಾರ ಬೇರೆ ಉದ್ದೇಶಕ್ಕೆ ಬಳಸಲು ಬರುವುದಿಲ್ಲ.