alex Certify ಕಾಲು ಕಳೆದುಕೊಂಡರೂ ಪ್ರೀತಿಸಿದ ಹೃದಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಜೋಡಿ: ನಿಷ್ಕಲ್ಮಶ ಪ್ರೀತಿಗೆ ಇವರೇ ಮಾದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಕಳೆದುಕೊಂಡರೂ ಪ್ರೀತಿಸಿದ ಹೃದಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಜೋಡಿ: ನಿಷ್ಕಲ್ಮಶ ಪ್ರೀತಿಗೆ ಇವರೇ ಮಾದರಿ

ವಾಟ್‌ಅಪ್‌ನಲ್ಲಿ ಮೆಸೆಜ್, ಫೋನ್‌ನಲ್ಲಿ ಗಂಟೆಗಟ್ಟಲೇ ಮಾತನಾಡುವುದು ಇದೇ ಸ್ನೇಹ, ಪ್ರೀತಿ ಸಂಬಂಧಗಳಾಗಿವೆ. ಆದರೆ ಮೊದಲೆಲ್ಲ ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ ಇದಕ್ಕೆಲ್ಲ ಬೆಲೆಕಟ್ಟಲಾಗದ ಸಂಬಂಧವಾಗಿದ್ದವು. ಜೊತೆಗಿದ್ದರೆ ಕೊನೆಯುಸಿರಿನ ತನಕ ಅನ್ನುವ ಭಾವವಿತ್ತುಆದರೆ ಈಗ ಕಾಲ ಬದಲಾದ ಹಾಗೆ ಸಂಬಂಧಗಳು ಕ್ಷಣಿಕವಾಗಿ ಹೋಗಿವೆ.

ಇತ್ತಿಚೆಗೆ ಸೊಶಿಯಲ್ ಮೀಡಿಯಾದಲ್ಲಿ ಸಂಬಂಧಗಳು ಇದ್ದರೆ ಹೀಗಿರಬೇಕು, ಅನ್ನುವಂತಹ, ಬರ್ಫಾನಿ ಧಾಮ್‌ನ ಈ 90ರ ವಯಸ್ಸಿನ ಹದಿಹರೆಯದ ಜೋಡಿಗಳೆರಡು ಅನೇಕರಿಗೆ ಮಾದರಿಯಾಗಿದೆ.

ಆ ಜೋಡಿಯೇ ಹೇಳಿ ಮಾಡಿಸಿದಂತಿದ್ದ ಜೋಡಿ. ಅವರಿಬ್ಬರ ಮೇಲೆ ಅಧಾರ ವಕ್ರದೃಷ್ಟಿ ಬಿತೋ ಏನೋ ಒಂದು ದಿನ ಗಂಡ ಕೆಲಸಕ್ಕೆಂದು ಹೋದಾಗ ಅಪಘಾತಕ್ಕೆ ಸಿಕ್ಕಿ ಕಾಲು ಕಳೆದುಕೊಂಡರು. ಆಗ ಅವರಿಬ್ಬರ ಮೇಲೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಆದರೂ ಆ ದಂಪತಿ ಧೈರ್ಯ ಕಳೆದುಕೊಂಡಿರಲಿಲ್ಲ. ಗಾಲಿ ಕುರ್ಚಿ ಮೇಲೆ ಕುಳಿತುಕೊಂಡ ಗಂಡನ ಜೊತೆಯೇ ಖುಷಿ-ಖುಷಿಯಾಗಿ ಜೀವನ ಕಳೆಯಲು ನಿರ್ಧರಿಸಿದರು.

ಇನ್ನೂ ಇದೇ ರೀತಿ ಇನ್ನೊಂದು ಜೋಡಿಯತ್ತ ನೀವು ಗಮನ ಹರಿಸಬೇಕು. ಈ ಗಂಡ-ಹೆಂಡತಿ ಕಡುಬಡತನದಲ್ಲೂ ಪ್ರೀತಿ, ಪ್ರೇಮದಲ್ಲೇ ಸರ್ವಸ್ವ ಕಂಡುಕೊಂಡಿದ್ದರು. ಆದರೆ ದುರದೃಷ್ಟವಶಾತ್ ಹೆಂಡತಿ ಅಪಘಾತವೊಂದರಲ್ಲಿ ತಲೆಗೆ ಪೆಟ್ಟು ತಿಂದು ಮಾನಸಿಕ ಸೀಮಿತವನ್ನ ಕಳೆದುಕೊಂಡರು. ಆ ಸಮಯದಲ್ಲಿ ಗಂಡನೇ ಮುಂದೆ ನಿಂತು ತಾನೇ ನಿನಗೆ ಎಲ್ಲವೂ ಎಂದು ನಿಂತರು. ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲ, ಆದರೂ ಗಂಡ ಗಾಲಿ ಕುಚಿ೯ಯಲ್ಲಿ ಕುಳಿತಿರುವ ಹೆಂಡತಿಯನ್ನ ಮಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಮದುವೆಯೆಂದರೆ ಕೇವಲ ಪ್ರತಿಜ್ಞೆ ಮಾಡುವುದಲ್ಲ, ಸಪ್ತಪದಿ ತುಳಿಯುವುದಲ್ಲ. ಜವಾಬ್ದಾರಿಯನ್ನ ಹಂಚಿಕೊಳ್ಳುವುದು. ಇಂದಿನ ದಿನಗಳಲ್ಲಿ ಚಿಕ್ಕ ಪುಟ್ಟ ಜಗಳವಾದಾಗ ದೂರವಾಗುವ ಗಂಡ-ಹೆಂಡತಿ ಜೋಡಿಗಳಿಗೆ ಈ ಹಿರಿಯ ಜೋಡಿಗಳಿಂದ ನೋಡಿ ಕಲಿಯುವ ಪಾಠ ತುಂಬಾ ಇದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...