ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಾಡಿಗೆ ಕಾರುಗಳು, ಆಟೋಗಳ ಸೇವೆಯನ್ನು ಮಹಾನಗರಗಳ ಜನರಿಗೆ ಒದಗಿಸುತ್ತಿರುವ ವಿದೇಶಿ ಕಂಪನಿ ಊಬರ್, ವ್ಯಕ್ತಿಯೊಬ್ಬರಿಗೆ ಕೇವಲ 17 ಕಿ.ಮೀ. ದೂರದ ಪ್ರಯಾಣಕ್ಕೆ ಬರೋಬ್ಬರಿ 10,413 ರೂ. ಬಿಲ್ ಹಾಕಿದೆ…!
ಹೌದು, ಬ್ರಿಟನ್ನಿನ ಮ್ಯಾಂಚೆಸ್ಟರ್ ಸಿಟಿಯಲ್ಲಿ ಡಿ.27ರಂದು ನೈಟ್‌ಕ್ಲಬ್‌ನಲ್ಲಿ ಸ್ನೇಹಿತರೊಂದಿಗೆ ಸ್ಯಾಮ್ ಜಾರ್ಜ್ ಭರ್ಜರಿ ಪಾರ್ಟಿ ಮಾಡಿದ್ದರು. ನಂತರ ಸ್ನೇಹಿತರೊಂದಿಗೆ ಊಬರ್ ಕಾರು ಸೇವೆ ಬಳಸಲು ಮುಂದಾದರು. 17 ಕಿ.ಮೀ. ದೂರದ ತಮ್ಮ ಮನೆಗೆ ಬಿಡಲು ಕಾರು ಏರಿ ಕುಳಿತರು. ಸುಮಾರು 11 ಕಿ.ಮೀ ದೂರ ಕ್ರಮಿಸಿದಾಗ ಬಿಲ್ ಮೊತ್ತದ ಜ್ಞಾಪಕವಾಗಿ ಊಬರ್ ಆಪ್‌ನಲ್ಲಿ ಕಣ್ಣಾಡಿಸಿದಾಗ ಸ್ಯಾಮ್‌ಗೆ ಆಘಾತ ಕಾದಿತ್ತು. ಯಾಕೆಂದರೆ, ಕ್ಯಾಬ್‌ನ ಬಿಲ್ 100 ಪೌಂಡ್ ದಾಟಿತ್ತು.
ಅಕ್ರಮ ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದ ತಾಲಿಬಾನ್
ಸಾಮಾನ್ಯವಾಗಿ ಕ್ಯಾಬ್ ಸೇವೆಯಲ್ಲಿ ಬಾಡಿಗೆ ಕಾರುಗಳನ್ನು ಏರಿದಾಗ ನೈಟ್‌ಕ್ಲಬ್‌ನಿಂದ ಮನೆಗೆ ಸಂಚರಿಸುವ ಸ್ಯಾಮ್, 2500 ರೂ. ನೀಡುತ್ತಾರೆ. ಇದು ಹಲವು ಬಾರಿ ನಡೆದಿದೆ. ಆದರೆ ಈ ಬಾರಿ ಮಾತ್ರ ಸ್ಯಾಮ್ ಅಕ್ಷರಶಃ ಆಘಾತದಿಂದ ತಲೆಕೆಟ್ಟವರಂತೆ ಕೂತುಬಿಟ್ಟರು. ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಮೋಜು ಮಾಡಿದಾಗಲೂ ಕೂಡ ಇಷ್ಟೊಂದು ಬಿಲ್ ಪಾವತಿ ಮಾಡಲಿಲ್ಲ. ಕೇವಲ 17 ಕಿ.ಮೀ ಕಾರಿನಲ್ಲಿ ಬಂದಿದ್ದಕ್ಕೆ ಇಷ್ಟೊಂದು ದೊಡ್ಡದ ಮೊತ್ತದ ಬಿಲ್ ಪಾವತಿಸಬೇಕೆ ಎಂದು ಅವರು ಊಬರ್ ಕಂಪನಿಗೆ ಬರೆದ ದೂರಿನಲ್ಲಿ ಪ್ರಶ್ನಿಸಿದ್ದಾರೆ.