ಕೆಲವೊಂದು ವಿಷಯಗಳು ವಿಚಿತ್ರವಾದ್ರೂ ನಂಬಲೇಬೇಕು. ನೀವು ಒಂದು ಮರದಲ್ಲಿ ಯಾವ-ಯಾವ ಹಣ್ಣು ಬೆಳೆಯುವುದನ್ನು ನೋಡಿದ್ದೀರಾ..? ಸಾಮಾನ್ಯವಾಗಿ ಮಾವಿನ ಮರದಲ್ಲಿ ಮಾವು, ಹಲಸಿನ ಮರದಲ್ಲಿ ಹಲಸು ಅಷ್ಟೇ ಅಲ್ವಾ..? ಆದ್ರೆ ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳು ಬೆಳೆದಿರುವುದನ್ನು ಎಂದಾದರೂ ನೋಡಿದ್ದೀರಾ..?
ಹೌದು, ಅಸಾಮಾನ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ ಸಿರಾಕ್ಯೂಸ್ ವಿವಿಯ ಸಹ ಪ್ರಾಧ್ಯಾಪಕ ಹಾಗೂ ರೈತರಾಗಿರುವ ವ್ಯಾನ್ ಅಕೆನ್ ಅವರು. ಇವರು ಒಂದು ಮರ ಬೆಳೆಸಿದ್ದು, ಇವು 40 ಬಗೆಯ ಹಣ್ಣುಗಳನ್ನು ನೀಡುತ್ವೆ. ‘ಟ್ರೀ ಆಫ್ 40’ ಎಂದು ಕರೆಯಲ್ಪಡುವ ಮರವು ಸದ್ಯ ಅಂತರ್ಜಾಲದಲ್ಲಿ ಭಾರಿ ಸುದ್ದಿಯಲ್ಲಿದೆ. ಪ್ಲಮ್, ಪೀಚ್, ಏಪ್ರಿಕಾಟ್, ಚೆರ್ರಿ ಹಾಗೂ ನೆಕ್ಟರಿನ್ ಮುಂತಾದ ಹಣ್ಣುಗಳು ಈ ವಿಶೇಷ ಮರದಲ್ಲಿ ಬೆಳೆಯುತ್ತವೆ.
BREAKING: ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ಮೈದಾನಕ್ಕೆ ಬರಲು ಪ್ರೇಕ್ಷಕರಿಗೆ ಬಿಸಿಸಿಐ ಅನುಮತಿ
ಈ ನಂಬಲಸಾಧ್ಯವಾದ ಸಾಧನೆಯನ್ನು ಮಾಡಿರುವ ಪ್ರೊ. ಸ್ಯಾಮ್, ಇದನ್ನು ಕಸಿ ಮಾಡುವ ತಂತ್ರದ ಮೂಲಕ ಸಾಧಿಸಿದ್ದಾರೆ. ಈ ತಂತ್ರದಲ್ಲಿ, ನೆಡುವಿಕೆಯ ವಿಭಿನ್ನ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಇದರಲ್ಲಿ, ಮೊಗ್ಗಿನ ಜೊತೆಗೆ ಮರದ ಕೊಂಬೆಯನ್ನು ಬೇರ್ಪಡಿಸಲಾಗುತ್ತದೆ. 2008ರಲ್ಲಿ ಸ್ಯಾಮ್ ಅವರು ಈ ಯೋಜನೆ ರೂಪಿಸಿದ್ದರು.