alex Certify BREAKING: ಐಪಿಎಲ್​ ಪಂದ್ಯಾವಳಿ ವೀಕ್ಷಣೆಗೆ ಮೈದಾನಕ್ಕೆ ಬರಲು ಪ್ರೇಕ್ಷಕರಿಗೆ ಬಿಸಿಸಿಐ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಐಪಿಎಲ್​ ಪಂದ್ಯಾವಳಿ ವೀಕ್ಷಣೆಗೆ ಮೈದಾನಕ್ಕೆ ಬರಲು ಪ್ರೇಕ್ಷಕರಿಗೆ ಬಿಸಿಸಿಐ ಅನುಮತಿ

ಭಾನುವಾರದಿಂದ ಆರಂಭಗೊಳ್ಳಲಿರುವ ಐಪಿಎಲ್​ 2ನೇ ಸೀಸನ್​​ಗೆ ಪ್ರೇಕ್ಷಕರನ್ನು ಭಾಗಶಃ ಅನುಮತಿಸುವುದಾಗಿ ಬಿಸಿಸಿಐ ಹಾಗೂ ಅರಬ್​​ ಸರ್ಕಾರವು ಅಧಿಕೃತ ಮಾಹಿತಿ ನೀಡಿವೆ.

ಕ್ರಿಕೆಟ್​ ಮೈದಾನದಲ್ಲಿ ಪ್ರೇಕ್ಷಕರ ಆಗಮನಕ್ಕೆ ಬಿಸಿಸಿಐ ಹಾಗೂ ಅರಬ್​ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ. ಸ್ಟೇಡಿಯಂನಲ್ಲಿ ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ತಗುಲದಂತೆ ಎಮಿರೇಟ್ಸ್​ ಕ್ರಿಕೆಟ್​ ಬೋರ್ಡ್​ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆ ಪಡೆದವರು ಮಾತ್ರ ಐಪಿಎಲ್​ ಕ್ರಿಕೆಟ್ ​ನ್ನು ಮೈದಾನದಲ್ಲಿ ಕೂತು ವೀಕ್ಷಿಸಬಹುದು ಎಂದು ಅರಬ್​ ಸರ್ಕಾರ ಹೇಳಿದೆ. ಅರಬ್ ರಾಷ್ಟ್ರಗಳಲ್ಲಿ ಕೊರೊನಾ ಸಂಖ್ಯೆಯು ಕ್ಷೀಣಿಸುತ್ತಿದೆ. ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ ಸದ್ಯಕ್ಕೆ ಪ್ರೇಕ್ಷಕರಿಗೆ ಮೈದಾನಕ್ಕೆ ಅವಕಾಶ ನೀಡಿದ್ದೇವೆ ಎಂದು ಬಿಸಿಸಿಐ ಹೇಳಿದೆ.

ಐಪಿಎಲ್​ 2ನೇ ಸೀಸನ್​ ಭಾನುವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. 27 ದಿನಗಳಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...