ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ’ಆ್ಯಂಟಿಕ್’ ಪ್ರಿಯರಿಗೆ ಪುರಾತನ ವಸ್ತುಗಳನ್ನು ಕಂಡರೆ ಬಲುಪ್ರೀತಿ. ಅದು ರಾಜರು ಬಳಸುತ್ತಿದ್ದ ವಸ್ತುಗಳಾಗಿರಬಹುದು, ಬ್ರಿಟಿಷರ ಕಾಲದ ದಿನಬಳಕೆ ಸಾಮಗ್ರಿಗಳಾಗಿರಬಹುದು ಅಥವಾ ಸ್ವಾತಂತ್ರ್ಯ ಭಾರತದ ಆರಂಭದ ಕಾಲದ ನಾಣ್ಯಗಳಾಗಿರಬಹುದು. ಅವುಗಳಲ್ಲಿ ಯಾವುದೇ ಸಿಕ್ಕರೂ ಅದನ್ನು ಆನ್ಲೈನ್ ಹರಾಜಿನಲ್ಲಿ ಇಟ್ಟು ಲಕ್ಷಾಂತರ ಗಳಿಸುವ ಚಾಳಿ ಶುರುವಾಗಿದೆ.
ದಿ ಫ್ಯಾಮಿಲಿ ಮ್ಯಾನ್ ನ ’ಚೆಲ್ಲಮ್ ಸರ್’ ಮೀಮ್ ಬಳಸಿಕೊಂಡ ಯುಪಿ ಪೊಲೀಸ್
ಬ್ರಿಟಿಷರ ಆಳ್ವಿಕೆ ಇದ್ದಾಗ ಚಲಾವಣೆಯಲ್ಲಿದ್ದ 1 ರೂ. ಮೌಲ್ಯದ ನಾಣ್ಯಕ್ಕೆ ಇತ್ತೀಚೆಗೆ ಆನ್ಲೈನ್ ಒಂದು ಕೋಟಿ ರೂ. ನೀಡಿ ಹರಾಜಿನ ಮೂಲಕ ಖರೀದಿಸಲಾಗಿರುವುದು ಭಾರಿ ವೈರಲ್ ಸುದ್ದಿಯಾಗಿದೆ. ಕಳೆದ ಜೂನ್ನಲ್ಲಿ ಅಮೆರಿಕದ ನ್ಯೂಯಾರ್ಕ್ನಲ್ಲಿ 1933ನೇ ಇಸವಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯವೊಂದಕ್ಕೆ ಸಂಗ್ರಹಕಾರನೊಬ್ಬ 138 ಕೋಟಿ ರೂ. ಕೊಟ್ಟು ಖರೀದಿಸಿದ್ದು ಜನರ ಹುಬ್ಬೇರುವಂತೆ ಮಾಡಿತ್ತು.
ಈ ರೀತಿಯ ಆನ್ಲೈನ್ ಖರೀದಿ ಮತ್ತು ಮಾರಾಟಕ್ಕೆ ಹಲವಾರು ವೆಬ್ಸೈಟ್ಗಳಿವೆ. ಆ ಪೈಕಿ ಬಹು ಜನಪ್ರಿಯತೆ ಗಳಿಸಿರುವುದು ಕಾಯಿನ್ಬಜಾರ್. ನೋಂದಣಿ ಮೂಲಕ ಯಾರು ಬೇಕಾದರು ಈ ವೆಬ್ಸೈಟ್ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಬಹುದಾಗಿದೆ.