alex Certify ಊರಿಗೆ ಬಂದ ವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಯುವತಿ: ಜೋಡಿಯಿಂದ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರಿಗೆ ಬಂದ ವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಯುವತಿ: ಜೋಡಿಯಿಂದ ದುಡುಕಿನ ನಿರ್ಧಾರ

ಮೊರಾದಾಬಾದ್: ಕುಟುಂಬಗಳು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ವಿವಾಹಿತ ವ್ಯಕ್ತಿ ಮತ್ತು ಆತನ ಗೆಳತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.

ಇಬ್ಬರು ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾರೆ. ಮೊರಾದಾಬಾದ್ ಜಿಲ್ಲೆಯ ಧಾರಕ್ ನಾಗ್ಲಾ ಗ್ರಾಮದ ನಿವಾಸಿಯಾಗಿರುವ ರಾಜ್ ಕುಮಾರ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. ಕಳೆದ ವರ್ಷ ರಾಜ್ ಕುಮಾರ್ ಸಂಣಾಲ್ ನಲ್ಲಿರುವ ತಮ್ಮ ಮಾವನ ಮನೆಗೆ ಹೋಗಿದ್ದು, ಅವಿವಾಹಿತೆಯಾಗಿದ್ದು, ಮಾವನ ಮಗಳೊಂದಿಗೆ ಸಂಬಂಧ ಬೆಳೆಸಿದ್ದಾನೆ. ಇಬ್ಬರು ಪ್ರೀತಿಯ ಬಂಧದಲ್ಲಿ ಸಿಲುಕಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಆದರೆ, ಅವರ ಕುಟುಂಬದವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸರಗೊಂಡ ರಾಜ್ ಕುಮಾರ್ ಮತ್ತು ಆತನ ಗೆಳತಿ ಮಂಗಳವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ಗುರುವಾರ ಇಬ್ಬರು ರಾಜ್ ಕುಮಾರ್ ಮನೆಗೆ ಆಗಮಿಸಿದ್ದು ಇದೇ ವೇಳೆ ವಿಷ ಸೇವಿಸಿರುವ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾರೆ. ಇಬ್ಬರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೊರಾದಾಬಾದ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ ಮಗಳನ್ನು ರಾಜ್ ಕುಮಾರ್ ಅಪಹರಿಸಿರುವುದಾಗಿ ಯುವತಿ ಕುಟುಂಬದವರು ಸಂಭಾಲ್ ಆಸ್ಪತ್ರೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...