alex Certify WAR BREAKING: ಉಕ್ರೇನ್ ಮನವಿ ತಿರಸ್ಕರಿಸಿದ ನ್ಯಾಟೋ; ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗತ್ತೆ; ಎಚ್ಚರಿಕೆ ನೀಡಿದ ಝೆಲೆನ್ಸ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್ ಮನವಿ ತಿರಸ್ಕರಿಸಿದ ನ್ಯಾಟೋ; ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗತ್ತೆ; ಎಚ್ಚರಿಕೆ ನೀಡಿದ ಝೆಲೆನ್ಸ್ಕಿ

ಕೀವ್: ಉಕ್ರೇನ್ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧಿಸುವಂತೆ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಮಾಡಿದ್ದ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದು, ಈ ನಡುವೆ ರಷ್ಯಾ ಭೂ, ಸಮುದ್ರ ಮತ್ತು ವಾಯು ಪ್ರದೇಶಗಳ ಮೂಲಕ ಉಕ್ರೇನ್ ಆಕ್ರಮಿಸುತ್ತಿದೆ.

ನ್ಯಾಟೋ ತನ್ನ ಮನವಿ ತಿರಸ್ಕರಿಸಿದ ಬೆನ್ನಲ್ಲೇ ಕಿಡಿಕಾರಿರುವ ಝೆಲೆನ್ಸ್ಕಿ, ನ್ಯಾಟೋ ಈ ನಿರ್ಧಾರ ರಷ್ಯಾಗೆ ಉಕ್ರೇನ್ ಮೇಲೆ ಇನ್ನಷ್ಟು ಬಾಂಬ್ ದಾಳಿ ನಡೆಸಲು ಬೆಂಬಲ ನೀಡಿದಂತಾಗಿದೆ. ಉಕ್ರೇನ್ ನ ಹಲವು ನಗರ, ಭೂ ಮಾರ್ಗಗಳ ಮೂಲಕ ಹಳ್ಳಿ ಹಳ್ಳಿಗಳ ಮೇಲೂ ರಷ್ಯಾ ದಾಳಿ ಮಾಡಬಹುದು. ಇನ್ನು ಮುಂದೆ ನ್ಯಾಟೋ ನಡೆಸುವ ಶೃಂಗ ಸಭೆ ದುರ್ಬಲ ಶೃಗ ಸಭೆಯಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ಅಲ್ಲದೇ ಒಂದು ವೇಳೆ ರಷ್ಯಾ ದಾಳಿಯಲ್ಲಿ ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗಲಿದೆ. ಯುರೋಪ್ ಜನತೆ ತಮ್ಮ ಮೌನ ಬಿಟ್ಟು ಉಕ್ರೇನ್ ಗೆ ಬೆಂಬಲ ನೀಡಿ. ಉಕ್ರೇನ್ ಸೇನೆ ಹಾಗೂ ರಷ್ಯಾ ವಿರುದ್ಧ ನಮ್ಮ ಹೋರಾಟಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...