alex Certify ಕೋವಿಡ್​ ಸೋಂಕಿತೆಯಾಗಿದ್ದ ಸ್ನೇಹಿತೆಗೆ ಕೇಳಬಾರದ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ವೈದ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕಿತೆಯಾಗಿದ್ದ ಸ್ನೇಹಿತೆಗೆ ಕೇಳಬಾರದ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ವೈದ್ಯೆ..!

ಲಂಡನ್​​ನ ಫಿಂಚ್ಲಿಯ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸ್ನೇಹಿತೆಯೊಂದಿಗೆ ನಡೆಸಿದ ಅತ್ಯಂತ ವಿಚಿತ್ರವಾದ ಚಾಟ್​ ಸಂಭಾಷಣೆಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಮಹಿಳಾ ಉದ್ಯಮಿಯ ಸ್ನೇಹಿತೆ ಕೋವಿಡ್ ಪಾಸಿಟಿವ್​ ವರದಿಯನ್ನು ಗರ್ಭಧರಣೆಯ ಪಾಸಿಟಿವ್​ ವರದಿ ಎಂದು ತಪ್ಪಾಗಿ ಅರ್ಥೈಸಿಕೊಂಡ ಘಟನೆ ಇದಾಗಿದೆ.

ಪಾಸಿಟಿವ್​ ವರದಿ ಪಡೆದ ಬಳಿಕ, 34 ವರ್ಷದ ಹೆಲೆನ್​ ಫಿಲಿಪ್ಸ್ ಎಂಬವರು ತಮ್ಮ ಸ್ನೇಹಿತೆಗೆ ಪಾಸಿಟಿವ್​ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೈದ್ಯೆ ಕೂಡ ಆಗಿದ್ದ ಸ್ನೇಹಿತೆ ಈಗ ಹೇಗೆ ಎನಿಸುತ್ತಿದೆ ಹಾಗೂ ಯಾವೆಲ್ಲ ಲಕ್ಷಣ ಇದೆ ಎಂದು ಕೇಳಿದ್ದಾರೆ.

ಇದಕ್ಕೆ ಹೆಲೆನ್​ ಸ್ವಲ್ಪ ಶೀತ ಹಾಗೂ ಗಂಟಲು ನೋವು ಬಿಟ್ಟರೆ ಬೇರೇನೂ ಇಲ್ಲ ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಾಕ್ಟರ್​ ಸ್ನೇಹಿತೆ ಈ ವರದಿಯಿಂದ ನೀನು ಖುಷಿಯಾಗಿದ್ದೀಯಾ ಅಲ್ಲವಾ ಎಂದು ಕೇಳಿದ್ದಾರೆ..?

ಆಗ ಅನುಮಾನಗೊಂಡ ಹೆಲೆನ್, ಕೋವಿಡ್ ಪಾಸಿಟಿವ್​ ವರದಿಯ ಬಗ್ಗೆ ಖುಷಿಪಡಬೇಕೆ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಇಬ್ಬರಿಗೂ ಇಲ್ಲಿ ಆದ ಗೊಂದಲದ ಬಗ್ಗೆ ಅರಿವಾಗಿದೆ. ಹೆಲೆನ್​ ಕೋವಿಡ್​ ಪಾಸಿಟಿವ್​ ವರದಿ ಬಗ್ಗೆ ಮಾತನಾಡುತ್ತಿದ್ದರೆ ಡಾಕ್ಟರ್​ ಸ್ನೇಹಿತೆ ಹೆಲೆನ್​ ಗರ್ಭಿಣಿ ಆಗಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದರು. ಈ ಚಾಟ್​ ಸಂಭಾಷಣೆಯು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...