ಲಂಡನ್ನ ಫಿಂಚ್ಲಿಯ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸ್ನೇಹಿತೆಯೊಂದಿಗೆ ನಡೆಸಿದ ಅತ್ಯಂತ ವಿಚಿತ್ರವಾದ ಚಾಟ್ ಸಂಭಾಷಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಮಹಿಳಾ ಉದ್ಯಮಿಯ ಸ್ನೇಹಿತೆ ಕೋವಿಡ್ ಪಾಸಿಟಿವ್ ವರದಿಯನ್ನು ಗರ್ಭಧರಣೆಯ ಪಾಸಿಟಿವ್ ವರದಿ ಎಂದು ತಪ್ಪಾಗಿ ಅರ್ಥೈಸಿಕೊಂಡ ಘಟನೆ ಇದಾಗಿದೆ.
ಪಾಸಿಟಿವ್ ವರದಿ ಪಡೆದ ಬಳಿಕ, 34 ವರ್ಷದ ಹೆಲೆನ್ ಫಿಲಿಪ್ಸ್ ಎಂಬವರು ತಮ್ಮ ಸ್ನೇಹಿತೆಗೆ ಪಾಸಿಟಿವ್ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೈದ್ಯೆ ಕೂಡ ಆಗಿದ್ದ ಸ್ನೇಹಿತೆ ಈಗ ಹೇಗೆ ಎನಿಸುತ್ತಿದೆ ಹಾಗೂ ಯಾವೆಲ್ಲ ಲಕ್ಷಣ ಇದೆ ಎಂದು ಕೇಳಿದ್ದಾರೆ.
ಇದಕ್ಕೆ ಹೆಲೆನ್ ಸ್ವಲ್ಪ ಶೀತ ಹಾಗೂ ಗಂಟಲು ನೋವು ಬಿಟ್ಟರೆ ಬೇರೇನೂ ಇಲ್ಲ ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಾಕ್ಟರ್ ಸ್ನೇಹಿತೆ ಈ ವರದಿಯಿಂದ ನೀನು ಖುಷಿಯಾಗಿದ್ದೀಯಾ ಅಲ್ಲವಾ ಎಂದು ಕೇಳಿದ್ದಾರೆ..?
ಆಗ ಅನುಮಾನಗೊಂಡ ಹೆಲೆನ್, ಕೋವಿಡ್ ಪಾಸಿಟಿವ್ ವರದಿಯ ಬಗ್ಗೆ ಖುಷಿಪಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಇಬ್ಬರಿಗೂ ಇಲ್ಲಿ ಆದ ಗೊಂದಲದ ಬಗ್ಗೆ ಅರಿವಾಗಿದೆ. ಹೆಲೆನ್ ಕೋವಿಡ್ ಪಾಸಿಟಿವ್ ವರದಿ ಬಗ್ಗೆ ಮಾತನಾಡುತ್ತಿದ್ದರೆ ಡಾಕ್ಟರ್ ಸ್ನೇಹಿತೆ ಹೆಲೆನ್ ಗರ್ಭಿಣಿ ಆಗಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದರು. ಈ ಚಾಟ್ ಸಂಭಾಷಣೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.