alex Certify ಈ ಮಹಿಳೆಯ ವಿಚಿತ್ರ ಹವ್ಯಾಸದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಹಿಳೆಯ ವಿಚಿತ್ರ ಹವ್ಯಾಸದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ…!

ಇಂಗ್ಲೆಂಡ್​ನ ನೋರ್ಪೋಕ್​ ಎಂಬಲ್ಲಿನ ಮಹಿಳೆಯೊಬ್ಬರು ವಿಚಿತ್ರ ಹವ್ಯಾಸವನ್ನ ಹೊಂದಿದ್ದಾರೆ. ಈ ಮಹಿಳೆಯು ತನ್ನ ದೇಶದಲ್ಲಿರುವ ಪ್ರತಿಯೊಂದು ಸಮಾಧಿ ಹಾಗೂ ಸ್ಮಾರಕಗಳ ಫೋಟೋಗ್ರಫಿ ಕ್ಲಿಕ್ಕಿಸುವ ಅಭ್ಯಾಸವನ್ನ ಹೊಂದಿದ್ದಾರೆ.

ಆದರೆ ಈಗ ಸಾವಿಗೀಡಾಗಿರುವ ಸಂಖ್ಯೆ ಮಿತಿಮೀರುತ್ತಿರೋದ್ರಿಂದ ಈಕೆಗೆ ಈ ಅಭ್ಯಾಸ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ. 48 ವರ್ಷದ ಲ್ಯೂ ಕೊಕರ್​ ಎಂಬಾಕೆ ಈಗಾಗಲೇ 2,20,000 ಸಮಾಧಿ ಹಾಗೂ ಸ್ಮಾರಕಗಳ ಫೋಟೊಗಳನ್ನ ಕ್ಲಿಕ್ಕಿಸಿದ್ದಾಳೆ.

ಈ ಫೋಟೋಗಳಲ್ಲಿ 1600 ದಶಕಗಳ ಸ್ಮಾರಕಗಳೂ ಇವೆ. ಲೌ ಹಾಗೂ ಆಕೆಯ ತಾಯಿ ಕೆಲವು ಕಡೆ ತಾವೇ ಸಮಾಧಿಗಳನ್ನ ಸ್ವಚ್ಛ ಮಾಡಿ ಬಳಿಕ ಅದರ ಫೋಟೋ ಕ್ಲಿಕ್ಕಿಸಿದ್ದಾರೆ. ಲೌ ದಶಕಗಳ ಪರಿಶ್ರಮದ ಬಳಿಕ ಇಷ್ಟೊಂದು ಫೋಟೋಗಳನ್ನ ಸಂಗ್ರಹಿಸಿದ್ದಾರೆ.

ಇನ್ನು ತಮ್ಮ ಈ ವಿಚಿತ್ರ ಹವ್ಯಾಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಲೌ, ಬಹುಶಃ ನನ್ನ ಹವ್ಯಾಸಕ್ಕೆ ಕೊನೆ ಎನ್ನೋದೇ ಇಲ್ಲವೇನೋ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...