ಇಂಗ್ಲೆಂಡ್ನ ನೋರ್ಪೋಕ್ ಎಂಬಲ್ಲಿನ ಮಹಿಳೆಯೊಬ್ಬರು ವಿಚಿತ್ರ ಹವ್ಯಾಸವನ್ನ ಹೊಂದಿದ್ದಾರೆ. ಈ ಮಹಿಳೆಯು ತನ್ನ ದೇಶದಲ್ಲಿರುವ ಪ್ರತಿಯೊಂದು ಸಮಾಧಿ ಹಾಗೂ ಸ್ಮಾರಕಗಳ ಫೋಟೋಗ್ರಫಿ ಕ್ಲಿಕ್ಕಿಸುವ ಅಭ್ಯಾಸವನ್ನ ಹೊಂದಿದ್ದಾರೆ.
ಆದರೆ ಈಗ ಸಾವಿಗೀಡಾಗಿರುವ ಸಂಖ್ಯೆ ಮಿತಿಮೀರುತ್ತಿರೋದ್ರಿಂದ ಈಕೆಗೆ ಈ ಅಭ್ಯಾಸ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ. 48 ವರ್ಷದ ಲ್ಯೂ ಕೊಕರ್ ಎಂಬಾಕೆ ಈಗಾಗಲೇ 2,20,000 ಸಮಾಧಿ ಹಾಗೂ ಸ್ಮಾರಕಗಳ ಫೋಟೊಗಳನ್ನ ಕ್ಲಿಕ್ಕಿಸಿದ್ದಾಳೆ.
ಈ ಫೋಟೋಗಳಲ್ಲಿ 1600 ದಶಕಗಳ ಸ್ಮಾರಕಗಳೂ ಇವೆ. ಲೌ ಹಾಗೂ ಆಕೆಯ ತಾಯಿ ಕೆಲವು ಕಡೆ ತಾವೇ ಸಮಾಧಿಗಳನ್ನ ಸ್ವಚ್ಛ ಮಾಡಿ ಬಳಿಕ ಅದರ ಫೋಟೋ ಕ್ಲಿಕ್ಕಿಸಿದ್ದಾರೆ. ಲೌ ದಶಕಗಳ ಪರಿಶ್ರಮದ ಬಳಿಕ ಇಷ್ಟೊಂದು ಫೋಟೋಗಳನ್ನ ಸಂಗ್ರಹಿಸಿದ್ದಾರೆ.
ಇನ್ನು ತಮ್ಮ ಈ ವಿಚಿತ್ರ ಹವ್ಯಾಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಲೌ, ಬಹುಶಃ ನನ್ನ ಹವ್ಯಾಸಕ್ಕೆ ಕೊನೆ ಎನ್ನೋದೇ ಇಲ್ಲವೇನೋ ಎಂದು ಹೇಳಿದ್ದಾಳೆ.