ಇಂಗ್ಲೆಂಡ್‌ನ ಯಾರ್ಕ್‌ಶೈರ್‌ನ ಮಹಿಳೆಯೊಬ್ಬರು ತಮ್ಮ ಪಕ್ಕದ ಮನೆಯ ಅಂಗಳದಲ್ಲಿ ಸಜೀವ ಗಾತ್ರದ ಪ್ಲಾಸ್ಟಿಕ್ ಮೊಸಳೆಯೊಂದನ್ನು ಕಂಡು ಜೀವಮಾನದ ಶಾಕ್‌ಗೆ ಒಳಗಾಗಿದ್ದಾರೆ. ಆದರೆ ತಾನು ಯಾವ ಮಟ್ಟಿಗೆ ಮೂರ್ಖಳಾದೆ ಎಂದು ಅರಿಯುತ್ತಲೇ ಖುದ್ದು ಆಕೆಗೇ ಗರ ಬಡಿದಂತಾಗಿದೆ.
ಸಾರಾ ಜೇಯ್ನ್ ಎಲ್ಲಿಸ್ ಹೆಸರಿನ ಈ ಮಹಿಳೆ ವೃತ್ತಿಯಲ್ಲಿ ನರ್ಸ್ ಆಗಿದ್ದು, ತಾನು ವಾಸಿಸುವ ಪ್ರದೇಶದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಮೊಸಳೆಗಳು ಕಾಣಿಸಿಕೊಳ್ಳುವ ಕಾರಣ ಪಕ್ಕದ ಮನೆಯ ಅಂಗಳದಲ್ಲಿ ಕಂಡ ಪ್ಲಾಸ್ಟಿಕ್ ಮೊಸಳೆ ಕಂಡು ಬೆಚ್ಚಿದ್ದಾರೆ.
ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ
ತನ್ನ ಕೋಣೆಯ ಕಿಟಕಿಗಳನ್ನು ಮುಚ್ಚುತ್ತಿದ್ದ ವೇಳೆ ಪಕ್ಕದ ಮನೆಯ ಅಂಗಳದಲ್ಲಿ ಮೊಸಳೆಯನ್ನು ಕಂಡ ಸಾರಾ ಅದೇ ಬೆಡ್‌ರೂಂನಲ್ಲಿ ಲಾಕ್ ಮಾಡಿಕೊಂಡಿದ್ದಾರೆ. ಗಂಟೆಗಳ ಕಾಲ ಆಚೆ ಬರಲು ನಿರಾಕರಿಸಿದ ಸಾರಾ, ತನ್ನ ಸಹೋದರಿ ಸಂಬಂಧಿಯೊಬ್ಬರಿಗೂ 4-5 ಅಡಿ ಉದ್ದದ ಈ ಪ್ಲಾಸ್ಟಿಕ್ ಪ್ರತಿಕೃತಿ ತೋರಿದ್ದಾರೆ.
ಸಾರಾ ವಾಸಿಸುವ ಪ್ರದೇಶವು ಆರೀ ನದಿಯ ಬಳಿಯಿದ್ದು, ಈ ಊರಿನ ಬೀದಿಗಳಲ್ಲಿ ಮೊಸಳೆಗಳು ಆಗಾಗ ಕಾಣಿಸಿಕೊಳ್ಳುವುದು ಅಚ್ಚರಿಯ ಸಂಗತಿಯೇನಲ್ಲ.