alex Certify ಗಸ್ತು ತಿರುಗಲು, ಅಪರಾಧ ಕೃತ್ಯ ಕಡಿಮೆ ಮಾಡಲು ಕಾರಿನ ಬದಲು ರಿಕ್ಷಾ: ಹೊಸ ಯೋಜನೆಗೆ ನೆಟ್ಟಿಗರ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಸ್ತು ತಿರುಗಲು, ಅಪರಾಧ ಕೃತ್ಯ ಕಡಿಮೆ ಮಾಡಲು ಕಾರಿನ ಬದಲು ರಿಕ್ಷಾ: ಹೊಸ ಯೋಜನೆಗೆ ನೆಟ್ಟಿಗರ ಶ್ಲಾಘನೆ

ಲಂಡನ್​: ಅಪರಾಧದ ವಿರುದ್ಧ ಹೋರಾಡಲು ಇಂಗ್ಲೆಂಡ್​ ಪೊಲೀಸರು ಹೊಸದೊಂದು ಅಸ್ತ್ರವನ್ನು ಕಂಡುಹಿಡಿದಿದ್ದಾರೆ. ಪೊಲೀಸ್ ಪಡೆಗಳು ಗಸ್ತು ತಿರುಗಲು ಶಕ್ತಿಯುತವಾದ ತುಕ್-ತುಕ್ ಅಕಾ ಆಟೋ-ರಿಕ್ಷಾಗಳನ್ನು ಬಳಸುಲು ಆರಂಭಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ತ್ರಿಚಕ್ರ ವಾಹನದ ಬಳಕೆ ನ್ಯೂಪೋರ್ಟ್ ಮತ್ತು ಮೊನ್‌ಮೌತ್‌ಶೈರ್‌ನ ಅಬರ್ಗವೆನ್​ನಲ್ಲಿ ಆರಂಭಿಸಲಾಗಿದೆ. ಇದು ಎಲೆಕ್ಟ್ರಿಕಲ್​ ಆಟೋ ಆಗಿದೆ. ಬಿಬಿಸಿ ವರದಿಯ ಪ್ರಕಾರ, ಅಧಿಕಾರಿಗಳು ಹೊಸದಾಗಿ ಪರಿಚಯಿಸಲಾದ ವಾಹನವನ್ನು ಗಸ್ತು ತಿರುಗಲು ಮತ್ತು ಪಾರ್ಕಿಂಗ್ ಮಾಡಲು ಬಳಸುತ್ತಿದ್ದಾರೆ.

ಆ ಆಟೋರಿಕ್ಷಾ ಗಂಟೆಗೆ ಸುಮಾರು 55 ಕಿಲೋಮೀಟರ್​ ಚಲಿಸಬಲ್ಲುದು. ಇದರಿಂದಾಗಿ ಎಲ್ಲಿಯೇ ಅವಘಡಗಳು ನಡೆದರೂ ಅತಿ ಶೀಘ್ರದಲ್ಲಿ ಆ ಸ್ಥಳವನ್ನು ಮುಟ್ಟಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತಿದೆ. ಮಾತ್ರವಲ್ಲದೇ ರಾತ್ರಿಯ ವೇಳೆಯಲ್ಲಿ ಮಹಿಳೆಯರು ಸುರಕ್ಷಿತವಾಗಿ ತಿರುಗಾಡಲು ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಈ ಆಟೋ ನೆರವಾಗಬಲ್ಲುದು ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...