ಕೊರೊನಾ ಎರಡನೇ ಅಲೆ ಅಬ್ಬರ ಇನ್ನೂ ಶಾಂತವಾಗಿಲ್ಲ. ಆಗ್ಲೇ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಶೀಘ್ರವೇ ಮೂರನೇ ಅಲೆ ಶುರುವಾಗುವ ಸಾಧ್ಯತೆಯಿದೆ ಎಂದು ಬ್ರಿಟನ್ ಎಚ್ಚರಿಕೆ ನೀಡಿದೆ. ಚಳಿಗಾಲದ ವೇಳೆಗೆ ಮೂರನೇ ಅಲೆ ದಾಳಿ ನಡೆಸಲಿದೆ ಎಂದು ಬ್ರಿಟನ್ ತಜ್ಞರು ಹೇಳಿದ್ದಾರೆ.
ಚಳಿಗಾಲದ ವೇಳೆಗೆ ಕೊರೊನಾ ವೈರಸ್ನ ಹೊಸ ರೂಪಾಂತರವು ಬ್ರಿಟನ್ನಲ್ಲಿ ಸಕ್ರಿಯವಾಗಲಿದೆ. ಬ್ರಿಟನ್ನಲ್ಲಿ ಈ ವರ್ಷದ ಚಳಿಗಾಲ ಕಷ್ಟಕರವಾಗಿರಲಿದೆ. ವರದಿಯ ಪ್ರಕಾರ ಈ ವರ್ಷದ ಅಂತ್ಯದ ವೇಳೆಗೆ, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಈ ವೈರಸ್ಗೆ ಬಲಿಯಾಗಬಹುದು ಎನ್ನಲಾಗ್ತಿದೆ.
ಬ್ರಿಟಿಷ್ ಸರ್ಕಾರದ ಸಲಹಾ ಸಂಸ್ಥೆಯಾದ ಸೈಂಟಿಫಿಕ್ ಅಡ್ವೈಸರಿ ಗ್ರೂಪ್ ಫಾರ್ ಎಮರ್ಜೆನ್ಸಿ ಈ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಚಳಿಗಾಲದಲ್ಲಿ ಮತ್ತೆ ಕೊರೊನಾ ಲಾಕ್ಡೌನ್ ವಿಧಿಸುವ ಸಾಧ್ಯತೆಯಿದೆ. ರೂಪಾಂತರದ ವಿರುದ್ಧ ಹೋರಾಡಲು ಕೊರೊನಾ ಲಸಿಕೆ, ಪರೀಕ್ಷೆ ಮತ್ತು ಇತರ ಚಿಕಿತ್ಸೆಯನ್ನು ಹೊಂದಿದ್ದು, ಭಯಪಡುವ ಅಗತ್ಯವಿಲ್ಲವೆಂದು ತಜ್ಞರು ಹೇಳಿದ್ದಾರೆ.