ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ ಬ್ರಿಟೀಷ್ ವ್ಯಕ್ತಿಯೊಬ್ಬ 9 ಗಂಟೆ ಅವಧಿಯಲ್ಲಿ 51 ಪಬ್ಗಳಿಗೆ ಭೇಟಿ ನೀಡುವ ಮೂಲಕ ಗಿನ್ನೆಸ್ ದಾಖಲೆ ಪುಟಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. ಪ್ರತಿಯೊಂದು ಪಬ್ನಲ್ಲಿಯೂ ಮಾಟ್ ಎಲ್ಲಿಸ್ 125 ಮಿ.ಲೀ ಡ್ರಿಂಕ್ಸ್ ಕುಡಿದಿದ್ದಾರೆ.
ಜೈಲಿಗೆ ಹೋಗಲು ಕಾರಣವಾಯ್ತು ‘ಪೋರ್ನ್’ ಅಭ್ಯಾಸ, ಮಾಯಾಂಗನೆಯ ಮೋಹದ ಬಲೆಗೆ ಬಿದ್ದವ ಮಾಡಿದ್ದೇನು ಗೊತ್ತಾ…?
ವೈನ್ ಬ್ಯುಸಿನೆಸ್ ನಡೆಸುವ ಮ್ಯಾಟ್ಗೆ ಪಬ್ಗಳು ಅಂದರೆ ಪಂಚಪ್ರಾಣವಂತೆ. ಹೀಗಾಗಿ ಜನರು ಸ್ಥಳೀಯ ಪಬ್ಗಳಿಗೆ ತೆರಳಿ ಎಂಜಾಯ್ ಮಾಡೋದನ್ನು ಉತ್ತೇಜಿಸಲಿಕ್ಕೋಸ್ಕರ ಈ ರೀತಿಯ ಸಾಧನೆ ಮಾಡಿದ್ದಾರಂತೆ. ಪ್ರತಿಯೊಂದು ಪಬ್ನಲ್ಲೂ ಮ್ಯಾಟ್ 4 ನಿಮಿಷ ಸಮಯ ವ್ಯಯಿಸಿದ್ದಾರೆ. ಹಾಗೂ ಅತ್ಯಂತ ಬೇಗನೇ ತಯಾರಿಸಲು ಆಗುವಂತಹ ಡ್ರಿಂಕ್ಗಳನ್ನೇ ಆರ್ಡರ್ ಮಾಡಿದ್ದಾರೆ.
ಸಂಪೂರ್ಣ ಪಬ್ ಟೂರ್ ಮುಗಿಸುವಷ್ಟರಲ್ಲಿ ಮ್ಯಾಟ್ ಒಟ್ಟು 6.3 ಲೀಟರ್ ಪಾನೀಯಗಳನ್ನು ಸೇವನೆ ಮಾಡಿದ್ದರು. ತಮಗೆ ಹೊಟ್ಟೆಯಲ್ಲಿ ಕೇವಲ ನೀರೇ ತುಂಬಿದೆ ಎಂದು ಭಾಸವಾಗ್ತಿತ್ತು ಅಂತಾ ಮ್ಯಾಟ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.