alex Certify 101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ

ಬ್ರಿಟನ್‌ ನ ಶತಾಯುಷಿಗಳಲ್ಲಿ ಒಬ್ಬರಾದ ಜಾಕ್ ಅನ್ನಾಲ್ ಆಗಸ್ಟ್ 19ರಂದು 101ನೇ ವರ್ಷಕ್ಕೆ ಕಾಲಿಡಲಿದ್ದು, ತಮ್ಮ ಹುಟ್ಟುಹಬ್ಬಕ್ಕೆ 700 ಕಾರ್ಡ್‌ಗಳನ್ನು ಸ್ವೀಕರಿಸಿದ್ದಾರೆ.

ಪಶ್ಚಿಮ ಯಾರ್ಕ್‌‌ಶೈರ್‌ನ ಕೇರ್‌ ಹೋಂನಲ್ಲಿ ವಾಸಿಸುವ ಜಾಕ್‌ ಅವರ ಪುತ್ರಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು, ಕೋವಿಡ್ ಕಾರಣದಿಂದಾಗಿ ಬ್ರಿಟನ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಹುಟ್ಟುಹಬ್ಬದ ದಿನವೇ ಡಲ್ ಮೂಡ್‌ನಲ್ಲಿದ್ದ ಜಾಕ್‌ ಗೆ ಕೇರ್‌ ಹೋಂನ ಸಿಬ್ಬಂದಿ ಹಾಗೂ ನಿರ್ವಾಹಕಿ ವಿಕ್ಟೋರಿಯಾ ಗಡ್ಜಿನ್ ಖುಷಿ ಪಡಿಸಲು ಮುಂದಾಗಿದ್ದಾರೆ.

ಶತಾಯುಷಿ ಜಾಕ್‌ಗೆ ಬರ್ತ್‌ಡೇ ಕಾರ್ಡ್‌ಗಳನ್ನು ಕಳುಹಿಸಲು ಅನಾಮಿಕರನ್ನು ಕೋರಿಕೊಂಡ ಕೇರ್‌ ಹೋಂ ಸಿಬ್ಬಂದಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

ರಾಣಿ ಎಲಿಜ಼ಬೆತ್‌ ಸೇರಿದಂತೆ 700 ಮಂದಿ ಕಾರ್ಡ್‌ಗಳನ್ನು ಕಳುಹಿಸಿದ್ದು, ಎಲ್ಲವನ್ನೂ ಹರಡಿಕೊಂಡು ವಿಡಿಯೋ ಮಾಡಿ ಶೇರ್‌ ಮಾಡಿದ್ದಾರೆ ಕೇರ್‌ ಹೋಂ ಸಿಬ್ಬಂದಿ.

ವಾಯುಪಡೆ ಅಧಿಕಾರಿಗಳು ಹಾಗೂ ಸ್ಥಳೀಯ ಮೇಯರ್‌ ರನ್ನು ಭೇಟಿ ಮಾಡಲಿರುವ ಜಾಕ್‌ಗೆ ಹಿತ್ತಾಳೆ ಬ್ಯಾಂಡ್‌ನ ಕನ್ಸರ್ಟ್ ಮೂಲಕ ಬರ್ತ್‌‌ಡೇ ಬಾಯ್‌ಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...