alex Certify ಅರೇಂಜ್ ಮದುವೆಯಿಂದ ಪಾರಾಗಲು ಭಿತ್ತಿ ಪತ್ರದ ಮೊರೆ ಹೋದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೇಂಜ್ ಮದುವೆಯಿಂದ ಪಾರಾಗಲು ಭಿತ್ತಿ ಪತ್ರದ ಮೊರೆ ಹೋದ ಯುವಕ

ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನ ಬ್ಯಾಚಲರ್‌ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಮೈಲಿ ದೂರ ಹೋಗಿದ್ದಾರೆ.

ಬರ್ಮಿಂಗ್‌ಹ್ಯಾಂ ತುಂಬಾ ಭಿತ್ತಿಪತ್ರಗಳ ಮುಖಾಂತರ ತನಗೊಬ್ಬ ಸೂಕ್ತ ವಧು ಬೇಕಾಗಿದ್ದಾಳೆ ಎಂದು ಮೊಹಮ್ಮದ್ ಮಲ್ಲಿಕ್ ಎಂಬ 29 ವರ್ಷದ ಈತ ಜಾಹಿರಾತು ಹಾಕಿದ್ದಾರೆ. ತಾನು 5 ಅಡಿ 8 ಅಂಗುಲ ಉದ್ದವಿದ್ದು, ತೆಳ್ಳನೆಯ ದೇಹ ಹೊಂದಿದ್ದು, ಕ್ರಿಯೇಟಿವ್ ಆಗಿರುವುದಾಗಿ ಈತ ಹೇಳಿಕೊಂಡಿದ್ದಾರೆ.

BIG NEWS: ಜನವರಿ ವೇಳೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ

ಬರ್ಮಿಂಗ್‌ಹ್ಯಾಂ ಲೈವ್‌ನಲ್ಲಿ ಸೂಕ್ತ ಹುಡುಗಿ ಪತ್ತೆ ಮಾಡಲು ತಾನು ಪಡುತ್ತಿರುವ ಪಾಡನ್ನು ವಿವರಿಸಿದ ಮಲಿಕ್, “ನಾನು ಇನ್ನೂ ಸೂಕ್ತ ಹುಡುಗಿಯನ್ನು ಕಂಡುಕೊಂಡಿಲ್ಲ. ಇದು ಬಲು ಕಷ್ಟ,” ಎಂದು ಹೇಳಿಕೊಂಡಿದ್ದು, ಈ ಹೊಸ ಐಡಿಯಾ ಒಂದಕ್ಕೆ ಮುಂದಾಗಿದ್ದಾರೆ.

ತನ್ನ 20ರ ಹರೆಯದಲ್ಲಿರುವ ಮುಸ್ಲಿಂ ಹುಡುಗಿಯನ್ನು ಆದ್ಯತೆ ಮಾಡಿಕೊಂಡಿರುವುದಾಗಿ ಹೇಳುವ ಮಲ್ಲಿಕ್, ಈ ವಿಚಾರದಲ್ಲಿ ನಂಬಿಕೆ ಮತ್ತು ವ್ಯಕ್ತಿತ್ವಕ್ಕೂ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ.

“ನನ್ನನ್ನು ಅರೇಂಜ್ ಮದುವೆಯಿಂದ ಪಾರು ಮಾಡಿ,” ಎಂದು ಕೇಳಿಕೊಳ್ಳುತ್ತಿರುವ ಮಲಿಕ್‌ನ ಭಿತ್ತಿಪತ್ರಗಳು ನಗರಾದ್ಯಂತ ಗಮನ ಸೆಳೆಯುತ್ತಿವೆ. ಇದಕ್ಕಾಗಿ ಈತ ತನ್ನದೇ ಜಾಲತಾಣವೊಂದನ್ನು ’findmalikawife’ ಹೆಸರಿನಲ್ಲಿ ಆರಂಭಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...