ಬರೋಬ್ಬರಿ 15 ವರ್ಷಗಳ ಕಾಲ ಯುಕೆ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಇಷ್ಟು ವರ್ಷಗಳ ಬಳಿಕ ಟಿಮ್ ವಾರ್ಡ್ ಈಗ ಕಾರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದ್ದಾರೆ.
ವರದಿಯ ಪ್ರಕಾರ, ಟಿಮ್ ತನ್ನ ಕೆಂಪು ಬಣ್ಣದ ಫೋರ್ಡ್ ಎಸ್ಕಾರ್ಟ್ ಅನ್ನು ಇಂಗ್ಲೆಂಡ್‌ನ ವಿಲ್ಲೆಸ್‌ಡೆನ್‌ನಲ್ಲಿರುವ ಮನೆಯ ಹೊರಗೆ ನಿಲ್ಲಿಸಿದ್ದ. 2005 ಅಥವಾ 2006 ರಿಂದ ಇತ್ತೀಚಿನವರೆಗೂ ಟಿಮ್ ಆ ಕಾರು ಅದೇ ಸ್ಥಳದಲ್ಲಿ ನಿಲ್ಲಿಸಿದ್ದನು. ಅದನ್ನು ನಿಲ್ಲಿಸಿದ ಅವಧಿಯವರೆಗೆ, ತಾನು ಕಾರನ್ನು ಮುಟ್ಟಲಿಲ್ಲ ಎಂದು ಟಿಮ್ ಹೇಳಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳಲ್ಲಿ ವಾಹನವು ಬಹುತೇಕ ಪೊದೆಗಳಿಂದ ಮುಚ್ಚಲ್ಪಟ್ಟಿದೆ. ಆ ಪ್ರದೇಶದಲ್ಲಿ ಕಾರು ಇದೆಯೋ ಅಥವಾ ಪೊದೆಗಳೇ ಸುತ್ತಿಕೊಂಡಿದೆಯೋ ಎಂಬಂತೆ ಅನಿಸುತ್ತದೆ.
ಇನ್ನು ಕಾರನ್ನು ಅದೇ ಸ್ಥಳದಲ್ಲಿ ನಿಲ್ಲಿಸಲು ಕಾರಣ ಆತನ ತಾಯಿಯಂತೆ. ಟಿಮ್‌ನ ತಾಯಿ ಕಾರಿರುವ ಸ್ಥಳದ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದರು. ಭಾವನಾತ್ಮಕ ಮತ್ತು ಭದ್ರತಾ ಕಾರಣಗಳಿಗಾಗಿ ಕಾರನ್ನು ಅಲ್ಲಿ ನಿಲ್ಲಿಸಲು ಕೇಳಿಕೊಂಡಿದ್ದರು.
ಟಿಮ್ ಅವರ ತಾಯಿ 2016 ರಲ್ಲಿ ನಿಧನರಾಗಿದ್ದಾರೆ. ಆದರೂ ಕೂಡ ಕಾರನ್ನು ಚಲಾಯಿಸಲು ಟಿಮ್ ಮನಸ್ಸು ಮಾಡಿಲ್ಲ. ತನ್ನ ತಾಯಿ ವಾಹನವನ್ನು ಸ್ವಚ್ಛಗೊಳಿಸುತ್ತಿದ್ದಳು. ಆಕೆಯ ಮರಣದ ನಂತರ ಕಾರನ್ನು ಚಲಾಯಿಸುವ ಮನಸ್ಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆದರೀಗ, ಟಿಮ್ ತಾಯಿಯ ಮರಣದ ಆರು ವರ್ಷಗಳ ನಂತರ ಏಪ್ರಿಲ್ ಅಂತ್ಯದ ವೇಳೆಗೆ ಕಾರನ್ನು ಚಲಿಸಲಿದ್ದಾರೆ. ಬಹಳ ವರ್ಷಗಳ ಬಳಿಕ ತಮ್ಮ ಕಾರನ್ನು ಚಲಾಯಿಸಲಿರುವುದಾಗಿ ಟಿಮ್ ತಿಳಿಸಿದ್ದಾರೆ.