ಬರ್ಗರ್ ತಿನ್ನಬೇಕೆನ್ನುವ ಚಪಲ ಬ್ರಿಟನ್‌ನ ವ್ಯಕ್ತಿಯೊಬ್ಬನಿಗೆ ಭಾರೀ ದುಬಾರಿ ಬೆಲೆಯನ್ನೇ ತೆರುವಂತೆ ಮಾಡಿದೆ.
ಬ್ರಿಟನ್‌ನ ಮಿಡ್ಲೆಂಡ್ಸ್‌ನ ಲಿಟ್ಟಲ್ಟನ್‌ನಲ್ಲಿರುವ ಮ್ಯಾಕ್‌ಡೊನಾಲ್ಡ್‌ನ ಡ್ರೈವ್-ಥ್ರೂ ಸೌಲಭ್ಯದ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಅನೇಕ ಗ್ರಾಹಕರಿಗೆ 100 ಯೂರೋ (8,400 ರೂ.ಗಳು) ದಂಡ ತೆರಬೇಕಾಗಿ ಬಂದಿದೆ. ತಮ್ಮ ಆರ್ಡರ್ ಕಾರಿಗೆ ಬರಲು 10 ನಿಮಿಷಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಂಡ ವೇಳೆ ದಂಡ ಪಾವತಿಸಬೇಕೆಂಬ ನಿಯಮ ಗೊತ್ತಿಲ್ಲದ ಕಾರಣ ಅನೇಕ ಮಂದಿಗೆ ಭಾರೀ ದಂಡ ತೆರಬೇಕಾಗಿ ಬಂದಿದೆ.
ಫಾಸ್ಟ್-ಫುಡ್ ವ್ಯಾನ್ ಒಂದರ ಅಭಿಮಾನಿಯೊಬ್ಬ ಲಿಟ್ಟಲ್ಟನ್‌ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ವೇಳೆ ಊಟಕ್ಕೆ ಆರ್ಡರ್ ಕೊಟ್ಟು ಪಡೆದುಕೊಳ್ಳಲು ಬಹಳ ಹೊತ್ತು ಸರತಿಯಲ್ಲಿ ನಿಲ್ಲಬೇಕಾಗಿ ಬಂದಿದೆ. ರಿಚರ್ಡ್ ಮೂರ್ ಹೆಸರಿನ ಈ ವ್ಯಕ್ತಿ ಡ್ರೈವ್-ಥ್ರೂನಲ್ಲಿ ಹೆಚ್ಚಿನ ಅವಧಿಗೆ ನಿಂತ ಕಾರಣ ನಾಲ್ಕು ಪಟ್ಟು ದಂಡ ಕಟ್ಟಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ.
BIG NEWS: 2 ಡೋಸ್ ಲಸಿಕೆ ಪಡೆದವರಿಗೆ ‘ಬೂಸ್ಟರ್’ನಿಂದ ರಕ್ಷಣೆ ಬಗ್ಗೆ ಪುರಾವೆ ಇಲ್ಲ
ಕಳೆದ ಎರಡು ವರ್ಷಗಳಿಂದ ಡ್ರೈವ್-ಥ್ರೂ ಬಳಸುತ್ತಿರುವ ಮೂರ್‌ಗೆ ಹೊಸದಾಗಿ ಬದಲಾದ ನಿಯಮಗಳ ಬಗ್ಗೆ ಅರಿವಿರಲಿಲ್ಲ. ಡ್ರೈವ್-ಥ್ರೂನಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಂಡ ಕಾರಣ ದಂಡ ಕಟ್ಟಲು ಬಹಳ ಟಿಕೆಟ್‌ಗಳನ್ನು ಪಡೆಯಬೇಕಾಗಿ ಬಂದಿದೆ.
ಮ್ಯಾಕ್‌ಡೊನಾಲ್ಡ್ಸ್ ಔಟ್‌ಲೆಟ್ ಬದಲಾಗಿರುವ ನಿಯಮಗಳ ಬಗ್ಗೆ ತನ್ನ ಗ್ರಾಹಕರಿಗೆ ಅರಿವು ಮೂಡಿಸಲು ಒಂದೇ ಒಂದು ನೋಟಿಸ್ ಸಹ ಹಾಕಿಲ್ಲವೆಂದು ದೂರಿದ ಮೂರ್‌ಗೆ 400 ಯೂರೋ (34,000 ರೂಪಾಯಿ) ದಂಡ ಕಟ್ಟಲು ಟಿಕೆಟ್‌ಗಳನ್ನು ಪಡೆಯಬೇಕಾಗಿ ಬಂದಿದೆ.
ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR
ಈ ಕಹಿ ಅನುಭವದಿಂದ ಸಿಟ್ಟಿಗೆದ್ದ ಮ್ಯಾಕ್‌ಡೊನಾಲ್ಡ್ಸ್ ಗ್ರಾಹಕರು ಬಹಿಷ್ಕಾರದ ಬೆದರಿಕೆ ಹಾಕಿ, ಇವರ ಪೈಕಿ ಸಮೂಹವೊಂದು ಸ್ಥಳೀಯ ಕೌನ್ಸಿಲರ್‌ಗೆ ಅರ್ಜಿ ಬರೆದು, ಕಾಯುವ ಅವಧಿಯನ್ನು ಹೆಚ್ಚಿಸುವಂತೆ ಕೇಳಿದ್ದಾರೆ. ಅರ್ಜಿಗೆ ಇದುವರೆಗೂ 3000ಕ್ಕೂ ಹೆಚ್ಚಿನ ಸಹಿಗಳು ಸಂದಿವೆ. ಇದಕ್ಕೆ ಸ್ಪಂದಿಸಿದ ಕೌನ್ಸಿಲರ್ ಲೀ ಜೇವನ್ಸ್, ಖಂಡಿತವಾಗಿಯೂ ಕಾಯುವ ಅವಧಿಯನ್ನು ಹೆಚ್ಚಿಸಬೇಕೆಂದು ಹೇಳಿದ್ದಾರೆ.
ಪಾರ್ಕಿಂಗ್ ಲಾಟ್ ಅನ್ನು ಖಾಸಗಿ ಕಾಂಟ್ರಾಕ್ಟರ್‌ಗಳು ನಿಭಾಯಿಸುತ್ತಿದ್ದರೂ ಸಹ ಮ್ಯಾಕ್‌ಡೊನಾಲ್ಡ್ಸ್ ತನ್ನ ಪ್ರಭಾವ ಬಳಸಿಕೊಂಡು ಈ ವಿಚಾರದಲ್ಲಿ ರಿಲೀಫ್ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.