ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 200 ಡಾಲರ್ ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಆದರೆ, ಯುಕೆಯ ಮ್ಯಾಕ್ಸ್ ಫೋಶ್ ಎಂಬುವವರು ಮಸ್ಕ್ ಸಂಪತ್ತಿನ ದುಪ್ಪಟ್ಟು ನಿವ್ವಳ ಮೌಲ್ಯದೊಂದಿಗೆ 7 ನಿಮಿಷಗಳ ಕಾಲ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಕೇವಲ ಏಳು ನಿಮಿಷಗಳಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಕಳೆದುಕೊಂಡಿದ್ದರಿಂದ ಅವರ ಸಂತೋಷ ಅಲ್ಪಕಾಲಿಕವಾಗಿತ್ತು. ಫೋಶ್ ಅವರು ಸಂಕ್ಷಿಪ್ತವಾಗಿ ಹೇಗೆ ವಿಶ್ವದ ಶ್ರೀಮಂತ ವ್ಯಕ್ತಿಯಾದರು ಎಂಬುದನ್ನು ಯೂಟ್ಯೂಬ್ ನಲ್ಲಿ ವಿವರಿಸಿದ್ದಾರೆ.
10 ಬಿಲಿಯನ್ ಷೇರುಗಳನ್ನು ಹೊಂದಿರುವ ಕಂಪನಿಯನ್ನು ಅನಿಯಮಿತ ಹಣದ ಮಿತಿಯೊಂದಿಗೆ ರಚಿಸಿದರೆ ಮತ್ತು ನೋಂದಾಯಿಸಿದರೆ, ಹೂಡಿಕೆಯ ಅವಕಾಶವಾಗಿ 50 ಪೌಂಡ್ಗಳಿಗೆ ಒಂದು ಷೇರನ್ನು ಮಾರಾಟ ಮಾಡಬೇಕು. ಅದು ತನ್ನ ಕಂಪನಿಯನ್ನು ತಾಂತ್ರಿಕವಾಗಿ 500 ಬಿಲಿಯನ್ ಪೌಂಡ್ಗಳಿಗೆ ಕಾನೂನುಬದ್ಧವಾಗಿ ಮೌಲ್ಯೀಕರಿಸುತ್ತದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಈ ಮೊತ್ತವು ತನ್ನ ಹತ್ತಿರದ ಪ್ರತಿಸ್ಪರ್ಧಿ ಎಲೋನ್ ಮಸ್ಕ್ ಅವರನ್ನು ಸಂಪೂರ್ಣವಾಗಿ ಕೆಳಗಿಳಿಸುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾಗಿ ಅವರು ತಿಳಿಸಿದ್ದಾರೆ. ಅವರ ಯೂಟ್ಯೂಬ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯೂಟ್ಯೂಬ್ ಒಂದರಲ್ಲೇ ಈ ವಿಡಿಯೋವನ್ನು ಇದುವರೆಗೆ 5.75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಹಣ ಸಂಪಾದಿಸುವ ವಿಧಾನವನ್ನು ಮುಂದುವರಿಸಿದರೆ, ಅವರು ಮೋಸದ ಚಟುವಟಿಕೆ ನಡೆಸುತ್ತಿದ್ದಾರೆಂಬ ಆರೋಪಕ್ಕೆ ಒಳಗಾಗಬಹುದು ಎಂದು ಅವರು ಹೇಳಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದ ಅವರು, ಕಂಪನಿಯನ್ನು ಹೇಗೆ ರಚಿಸಿದೆ ಎಂಬುದಾಗಿ ತನ್ನ ಯೂಟ್ಯೂಬ್ ನಲ್ಲಿ ವಿವರಿಸಿದ್ದಾರೆ.