
ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ ತನ್ನ ಕಾರನ್ನು ಮಾರಬೇಕಾಗಿ ಬಂದಿದೆ.
ಆಪಲ್ ಐಫೋನ್‌ನಲ್ಲಿ ’ಡ್ರಾಗನ್ಸ್: ರೈಸ್ ಆಫ್ ಬರ್ಕ್’ ಹೆಸರಿನ ಈ ಗೇಮ್ ಆಡುವ ವೇಳೆ ಯುನೈಟೆಡ್ ಕಿಂಗ್ ಡಂ ನ ಅಶಾಜ಼್ ಮುತಾಸಾ ಹೆಸರಿನ ಈ ಬಾಲಕ ದುಬಾರಿ ಟಾಪ್‌ಅಪ್‌ಗಳನ್ನು ಪದೇ ಪದೇ ಮಾಡಿಸಿದ್ದಾನೆ. 1.99 ಪೌಂಡ್‌ನಿಂದ 99.99 ಪೌಂಡ್‌ಗಳವರೆಗೆ ವಿವಿಧ ಮುಖಬೆಲೆಯ ಟಾಪ್‌ಅಪ್‌ಗಳನ್ನು ಈ ಬಾಲಕ ಪದೇ ಪದೇ ಮಾಡಿರುವ ಕಾರಣ ಆತನ ತಂದೆಗೆ ಭಾರೀ ಹೊರೆ ಬಿದ್ದಿದೆ.
ಗರ್ಭಾವಸ್ಥೆಯಲ್ಲಿ ಕಾಡುವ ಗೊರಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ
ತನಗಾಗಿ ಕಾಯುತ್ತಿದ್ದ 29 ಇ-ಮೇಲ್‌ಗಳನ್ನು ಚೆಕ್ ಮಾಡಿದ ಮೇಲೆ ತನ್ನ ಮಗ ಮಾಡಿರುವ ಅವಾಂತರದ ಬಗ್ಗೆ 41 ವರ್ಷದ ಮುಹಮ್ಮದ್‌ಗೆ ತಿಳಿದುಬಂದಿದೆ.
ಈ ಬಗ್ಗೆ ಆಪಲ್‌ಗೆ ದೂರು ಕೊಟ್ಟ ಮುಹಮ್ಮದ್ 207 ಪೌಂಡ್‌ಗಳ ರೀಫಂಡ್ ಪಡೆಯಲು ಸಫಲರಾಗಿದ್ದಾರೆ. ಆದರೂ ತಮ್ಮ ಮಗ ತಂದಿಟ್ಟ ಬಿಲ್ ಪಾವತಿ ಮಾಡಲು ತಮ್ಮ ಬಳಿ ಇದ್ದ ಟೊಯೋಟಾ ಆಯ್ಗೋ ಕಾರನ್ನು ಮಾರಬೇಕಾಗಿ ಬಂದಿತ್ತು.