ನಿರಂತರ ವ್ಯಾಯಾಮ ಹಾಗೂ ಸೊಪ್ಪು-ತರಕಾರಿಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ.
ಸ್ಥೂಲಕಾಯರಾಗಿರುವ ಏಳು ಲಕ್ಷದಷ್ಟು ಮಂದಿಗೆ ತೂಕ ನಿರ್ವಹಣೆ ತರಬೇತಿ ಪಡೆಯಲು ನೆರವಾಗಲು ಮುಂದಾಗಿರುವ ಆರೋಗ್ಯ ಹಾಗೂ ಸಾಮಾಜಿಕ ಆರೈಕೆ ಇಲಾಖೆಯು ರಾಷ್ಟ್ರೀಯ ಆರೋಗ್ಯ ಸೇವೆಗೆ 70 ದಶಲಕ್ಷ ಪೌಂಡ್‌ಗಳನ್ನು ನೀಡಲಿದೆ.
ಇದರೊಂದಿಗೆ ವ್ಯಾಯಾಮ ಮಾಡಲು ಉಚಿತ ಟಿಕೆಟ್‌ಗಳು, ಆರೋಗ್ಯದ ಆಪ್‌ನಲ್ಲಿ ಪಾಯಿಂಟ್‌ಗಳನ್ನು ಸಹ ಕೊಡಮಾಡುತ್ತಿದ್ದು, ಇವುಗಳನ್ನು ವಿನಾಯಿತಿಗಳು ಹಾಗೂ ಪ್ರೋತ್ಸಾಹಧನಕ್ಕೆ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.
ಇಲ್ಲಿದೆ ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಕಿರು ಪರಿಚಯ
ಹೆಲ್ತ್ ಆಪ್ ಮೂಲಕ ಈ ಮಂದಿ ಎಷ್ಟರ ಮಟ್ಟಿಗೆ ಹಣ್ಣು-ತರಕಾರಿಗಳ ಸೇವನೆ ಮಾಡುತ್ತಿದ್ದಾರೆ ಎಂದು ಸರ್ಕಾರವು ಗಮನಿಸಲಿದೆ. ಪ್ರತಿ ಕುಟುಂಬವು ಸೂಪರ್‌ಮಾರ್ಕೆಟ್‌ನಲ್ಲಿ ಏನೆಲ್ಲಾ ಖರೀದಿ ಮಾಡುತ್ತಿದೆ ಎಂದೂ ಸಹ ಗಮನಿಸಲಾಗುವುದು.
ಅಧಿಕ ಕೆಲೊರಿ ಇರುವ ಆಹಾರ ಪದಾರ್ಥಗಳ ಬದಲಿಗೆ ಹಣ್ಣು-ತರಕಾರಿಗಳನ್ನು ಖರೀದಿ ಮಾಡುವ ಮಂದಿಗೆ ರಿವಾರ್ಡ್ ಅಂಕಗಳು ಸಂದಾಯವಾಗಲಿವೆ.