alex Certify ಇಲ್ಲಿದೆ ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಕಿರು ಪರಿಚಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಕಿರು ಪರಿಚಯ

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನಾಗಿ ಬಿಜೆಪಿಯ ಶಾಸಕಾಂಗ ಪಕ್ಷವು ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದೆ. ಈ ಮೂಲಕ ಬಿ.ಎಸ್‌. ಯಡಿಯೂರಪ್ಪ ಬಳಿಕ ಯಾರು ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಬಿಜೆಪಿ ತೆರೆ ಎಳೆದಿದೆ.

ಬೊಮ್ಮಾಯಿಯವರ ಕಿರು ಪರಿಚಯ ಇಂತಿದೆ:

– ಹಾವೇರಿಯ ಶಿಗ್ಗಾಂವಿ ಕ್ಷೇತ್ರವನ್ನು ಬೊಮ್ಮಾಯಿ ಪ್ರತಿನಿಧಿಸುತ್ತಿದ್ದಾರೆ.

– ಯಡಿಯೂರಪ್ಪ ಸರ್ಕಾರದಲ್ಲಿ ಬೊಮ್ಮಾಯಿ ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳನ್ನು ನಿಭಾಯಿಸಿದ್ದಾರೆ.

– 61 ವರ್ಷದ ಬಿಜೆಪಿಯ ನಾಯಕ ವೀರಶೈವ ಲಿಂಗಾಯುತ ಸಮುದಾಯಕ್ಕೆ ಸೇರಿದ್ದಾರೆ.

– ಬಸವರಾಜ ಬೊಮ್ಮಾಯಿ ತಂದೆ ಎಸ್‌.ಆರ್‌. ಬೊಮ್ಮಾಯಿ 1988-89ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

– ಜನತಾ ದಳದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಬೊಮ್ಮಾಯಿ ಯಡಿಯೂರಪ್ಪರ ಆಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.

– 2008ರಲ್ಲಿ ಬೊಮ್ಮಾಯಿ ಬಿಜೆಪಿ ಸೇರಿಕೊಂಡರು.

– ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿರುವ ಬೊಮ್ಮಾಯಿ ಪುಣೆಯಲ್ಲಿ ಮೂರು ವರ್ಷಗಳ ಕಾಲ ಟಾಟಾ ಮೋಟರ್ಸ್‌ನಲ್ಲಿ ಕೆಲಸ ಮಾಡಿದ್ದಾರೆ.

– ರಾಜ್ಯದಲ್ಲಿ ನೀರಾವರಿ ಯೋಜನೆಗಳ ಹಿಂದೆ ಶ್ರಮಿಸಿದ್ದಕ್ಕಾಗಿ ಬೊಮ್ಮಾಯಿಯವರನ್ನು ವ್ಯಾಪಕವಾಗಿ ಪ್ರಶಂಶಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...