ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಅಧಿಕಾರಿಯೊಬ್ಬರು ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ಮತ ಚಲಾಯಿಸುವಂತೆ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಹೊರಬಿದ್ದಿರುವ ವೀಡಿಯೊದ ಪ್ರಕಾರ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮೇ 13, 2024 ರಂದು ಸೋಮವಾರ ನಾಲ್ಕನೇ ಹಂತದ ಮತದಾನ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ಮತ ಚಲಾಯಿಸುವಂತೆ ಅಧಿಕಾರಿ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.
ಮತದಾನದ ಸಮಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಮತದಾರರ ಮುಂದೆ ‘ಮೋದಿ-ಮೋದಿ’ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಿ ಓರ್ವ ಪುರುಷ, ಮಹಿಳಾ ಅಧಿಕಾರಿಯ ನಡವಳಿಕೆ ಖಂಡಿಸಿ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಆದಾಗ್ಯೂ, ಅಧಿಕಾರಿಯು ಪುರುಷನಿಗೆ ಪದೇ ಪದೇ ಕೈಮುಗಿದು ಕ್ಷಮೆ ಯಾಚಿಸುವುದನ್ನು ಕಾಣಬಹುದು. ಮತದಾರರ ಮೇಲೆ ಒತ್ತಡ ಹೇರುವುದು ತನ್ನ ಉದ್ದೇಶವಲ್ಲ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ನ ಟ್ವಿಟರ್ ಖಾತೆ ವಿಡಿಯೋ ಹಂಚಿಕೊಡಿದೆ.