alex Certify ಲವ್, ಸೆಕ್ಸ್, ದೋಖಾ: ಪ್ರೀತಿ ಹೆಸರಲ್ಲಿ ದೈಹಿಕ ಸಂಬಂಧ ಬೆಳೆಸಿ ಗರ್ಭಪಾತ, ಮದುವೆ ವೇಳೆಯೇ ಬಯಲಾಯ್ತು ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಪ್ರೀತಿ ಹೆಸರಲ್ಲಿ ದೈಹಿಕ ಸಂಬಂಧ ಬೆಳೆಸಿ ಗರ್ಭಪಾತ, ಮದುವೆ ವೇಳೆಯೇ ಬಯಲಾಯ್ತು ಅಸಲಿಯತ್ತು

ಉಡುಪಿ: 13 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಗೆ ಕೈ ಕೊಟ್ಟು ಮದುವೆ ದಿನವೇ ಯುವಕ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಮಣಿಪಾಲದ ಯುವತಿ ಪರ್ಕಳದ ಗಣೇಶ್ ಎಂಬ ಯುವಕನನ್ನು 13 ವರ್ಷಗಳಿಂದ ಪ್ರೀತಿಸಿದ್ದಳು. ಇವರ ಮದುವೆ ಹಿಂದಿನ ದಿನವೇ ಗಣೇಶ್ ಪರಾರಿಯಾಗಿದ್ದು, ಕಂಗಾಲಾದ ಯುವತಿ ಆತನ ಮನೆಯ ಎದುರು ಪ್ರತಿಭಟನೆ ನಡೆಸಿದ್ದಾಳೆ.

13 ವರ್ಷಗಳಿಂದ ಪ್ರೀತಿಸಿದ್ದ ಗಣೇಶ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಮದುವೆಯಾಗುವ ನೆಪದಲ್ಲಿ ಸಂಬಂಧ ಬೆಳೆಸಿದ್ದು, ನಂಬಿಸಿದ್ದರಿಂದ ಆಕೆಯೂ ಒಪ್ಪಿಗೆ ಸೂಚಿಸಿದ್ದಳು. ಎರಡು ಸಲ ಗರ್ಭಿಣಿಯಾಗಿದ್ದ ಯುವತಿಗೆ ಗರ್ಭಪಾತ ಮಾಡಿಸಿದ್ದ ಆರೋಪಿ ಬಲವಂತದ ಬಳಿಕ ಮದುವೆಗೆ ಒಪ್ಪಿಕೊಂಡಿದ್ದ.

ನವೆಂಬರ್ 6 ರಂದು ಮದುವೆಗೆ ಮುಹೂರ್ತ ನಿಗದಿಯಾಗಿದ್ದು, ಆದರೆ, ನವೆಂಬರ್ 4 ರಂದೇ ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಯುವತಿ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಿದ್ದು ನಿಗದಿಯಾದಂತೆ ನವೆಂಬರ್ 6 ರಂದು ಯುವತಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಆದರೆ, ಮೆಹಂದಿ ಶಾಸ್ತ್ರ ಮುಗಿದ ಬಳಿಕ ಮದುವೆ ಹಿಂದಿನ ದಿನ ಗಣೇಶ್ ನಾಪತ್ತೆಯಾಗಿದ್ದಾನೆ. ಕಂಗಾಲಾದ ಯುವತಿ ಆತನ ಮನೆ ಎದುರು ಪ್ರತಿಭಟನೆ ನಡೆಸಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...